ಸದ್ಯಕ್ಕೆ ಹಾಲಿನ ದರ ಇಳಿಕೆ ಇಲ್ಲ : ಹೆಚ್. ಡಿ.ರೇವಣ್ಣ
ಬೆಂಗಳೂರು, ಡಿ.18 : ಹಾಲಿನ ದರ ಪರಿಷ್ಕರಣೆಯ ಬಗ್ಗೆ ರಾಜ್ಯಪಾಲ ರಾಮೇಶ್ವರ ಠಾಕೂರರು ಭರವಸೆ ನೀಡಿದ ಬೆನ್ನಲ್ಲೆ ಹಾಲಿನ ದರವನ್ನು ಇಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್. ಡಿ. ರೇವಣ್ಣ ಹೇಳಿದ್ದಾರೆ.
ಹಾಲು ಉತ್ಪಾದನೆಯ ವೆಚ್ಚ ಹೆಚ್ಚಿದೆ. ಹಾಲು ಉತ್ಪಾದಕರಿಗೆ ಸೂಕ್ತ ದರ ನಿಗದಿಯಾಗಿಲ್ಲ. ಪ್ರತಿ ಲೀಟರ್ ಮಾರಾಟದಿಂದ ಬರುವ 2ರೂ.ಗಳಲ್ಲಿ 1.50 ರೂ.ಹಾಲು ಉತ್ಪಾದಕರಿಗೆ, 30ಪೈಸೆ ಒಕ್ಕೂಟಕ್ಕೆ , 10ಪೈಸೆ ಗ್ರಾಮಮಟ್ಟದ ಸಿಬ್ಬಂದಿಗೆ ಉಳಿದ 10ಪೈಸೆ ಹಾಲು ವಿತರಕರಿಗೆ ನೀಡುವ ಯೋಚನೆಯಿದೆ ಎಂದು ಹೆಚ್.ಡಿ .ರೇವಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದರ ಇಳಿಕೆಯ ಬಗ್ಗೆ ರಾಜ್ಯಪಾಲರ ಹೇಳಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ರೇವಣ್ಣ ನಿರಾಕರಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications