ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ ಉಡುಪಿಗೂ ಬೇಕಿತ್ತಾ ಗಣೇಶ, ಆಂಜನೇಯ?

By Staff
|
Google Oneindia Kannada News

ಒಳ ಉಡುಪಿಗೂ ಬೇಕಿತ್ತಾ ಗಣೇಶ, ಆಂಜನೇಯ? ಭುವನೇಶ್ವರ, ಡಿ.18 : ಇ-ಮಾರಾಟದ ಮೂಲಕ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಅಮೆರಿಕದ ಒಳ ಉಡುಪು ತಯಾರಿಕಾ ಸಂಸ್ಥೆಯೊಂದು ತನ್ನ ಉತ್ಪನ್ನಗಳ ಮೇಲೆ ಹಿಂದೂ ದೇವರುಗಳನ್ನು ಚಿತ್ರಿಸಿ ಅಂತರ್ಜಾಲ ತಾಣದಲ್ಲಿ ಬಿಕರಿಗೆ ಇಟ್ಟಿದೆ. ಈ ಹಿಂದೆ ಅಮೆರಿಕದ ಒಳ ಉಡುಪು ತಯಾರಿಕಾ ಸಂಸ್ಥೆ ಇದೇ ರೀತಿ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿತ್ತು.

ಹೀಗೆ ಬೇಕಾಬಿಟ್ಟಿ ಹಿಂದೂ ದೇವದೇವತೆಗಳ ಚಿತ್ರಗಳನ್ನು ಒಳ ಉಡುಪುಗಳ ಮೇಲೆ ಚಿತ್ರಿಸಿದ್ದಕ್ಕಾಗಿ ಆ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಈ ಸಂಬಂಧ ಪುರಿ ಮೂಲದ ಧಾರ್ಮಿಕ ಸಂಸ್ಥೆಯೊಂದು ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಪುರಿ ಜಗನ್ನಾಥನ, ಬಲಭದ್ರ, ಸುಭದ್ರ, ಲಕ್ಷ್ಮೀ, ಆಂಜನೇಯ... ಸೇರಿದಂತೆ ಹೆಚ್ಚಿನ ಸಂಖ್ಯೆಯ ಹಿಂದು ದೇವದೇವತೆಗಳ ಚಿತ್ರಗಳನ್ನು ಚಿತ್ರಿಸಿ ಮಾರಾಟ ಮಾಡಿ, ಅವುಗಳನ್ನು ತನ್ನ ಅಂತರ್ಜಾಲ ತಾಣದಲ್ಲೂ ಪ್ರಕಟಿಸಿಕೊಂಡಿದೆ ಕ್ಯಾಲಿಫೋರ್ನಿಯಾ ಮೂಲದ ಕಂಪನಿ(www.cafepress.com). ಅಷ್ಟೇ ಅಲ್ಲದೆ ರಾಷ್ಟ್ರಧ್ವಜ, ಮಹಾತ್ಮಾಗಾಂಧಿ, ನೆಹರು ಸೇರಿದಂತೆ ಇನ್ನಿತರ ರಾಷ್ಟ್ರ ನಾಯಕರ ಚಿತ್ರಗಳೂ ಒಳ ಉಡುಪುಗಳ ಮೇಲೆ ಚಿತ್ರಿತವಾಗಿವೆ. ಭಾರತದ ರಾಯಭಾರಿ ಕಚೇರಿ ಮೂಲಕ ಕಂಪನಿಗೆ ಈ ವಿಷಯ ತಿಳಿಸಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ರೀತಿಯ ಆಕ್ಷೇಪಾರ್ಹ ಉತ್ಪನ್ನಗಳ ಮಾರಾಟ ನಿಲ್ಲಿಸುವಂತೆ ಹಾಗೂ ಪ್ರದರ್ಶಿಸದಂತೆ ಅಮೆರಿಕ ಕಂಪನಿಗೆ ಪತ್ರ ಬರೆದು ತಿಳಿಸಲಾಗುವುದು. ಈ ಸಂಬಂಧ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನೂ ಸಂಪರ್ಕಿಸುತ್ತೇವೆ ಎಂದು ದೇವಾಲಯದ ಆಡಳಿತಾಧಿಕಾರಿ ಸುರೇಶ್ ಮಹಾಪಾತ್ರ ತಿಳಿಸಿದ್ದಾರೆ. ಈ ರೀತಿ ಚಿತ್ರಿಸಿರುವುದನ್ನು ನಾನು ಖಂಡಿಸುತ್ತೇವೆ, ಕೇಂದ್ರ ಸರಕಾರ ತಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒರಿಸ್ಸಾ ಕಾನೂನು ಸಚಿವ ಬಿ.ಬಿ ಹರಿಚಂದನ್ ಆಗ್ರಹಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X