ಭಾರತ ಪ್ರಕಾಶಿಸುತ್ತಿದೆ ಎಂದದ್ದು ನಮ್ಮ ತಪ್ಪು : ಆಡ್ವಾಣಿ
ನವದೆಹಲಿ, ಡಿ.18 : ಕಳೆದ ಲೋಕಸಭಾ ಚುನಾವಣೆಯಲ್ಲಿ 'ಭಾರತ ಪ್ರಕಾಶಿಸುತ್ತಿದೆ' ಎಂಬ ಘೋಷಣೆ ಪ್ರತಿಬಿಂಬಿಸಬಾರದಿತ್ತು ಎಂಬುದು ನಮಗೆ ಮನವರಿಕೆಯಾಗಿದೆ. ನಿಜಕ್ಕೂ ಅದೊಂದು ಪ್ರಮಾದ ಎಂದು ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, 2004ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಟ್ಟು, ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷಣೆಯನ್ನು ಎಲ್ಲೆಡೆ ಬಿಜೆಪಿ ಮೊಳಗಿಸಿತ್ತು. ನಿಜಕ್ಕೂ ಭಾರತ ಪ್ರಕಾಶಿಸುತ್ತಿರಲಿಲ್ಲ. ಈಗಲೂ ಪ್ರಕಾಶಿಸುತ್ತಿಲ್ಲ ಎಂದರು. 'ಭಾರತ ಉದಯಿಸುತ್ತಿದೆ'ಎಂಬುದು ಒಂದು ಒಳ್ಳೆಯ ಘೋಷಣೆ ಎಂದು ಆಡ್ವಾಣಿ ಈ ಸಂದರ್ಭದಲ್ಲಿ ಹೇಳಿದರು.
(ಏಜನ್ಸೀಸ್)












Click it and Unblock the Notifications