ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಎಸ್ ಕಾಲೇಜು ಹಳೇ ವಿದ್ಯಾರ್ಥಿಗಳ ಅಲ್ಯುಮಿನಿ ಡೇ

By Staff
|
Google Oneindia Kannada News

ಬೆಂಗಳೂರು, ಡಿ.18 : ಬಿಎಂಎಸ್ ಕಾಲೇಜಿನ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರುವ ಸುಸಂದರ್ಭ ಹತ್ತಿರದಲ್ಲಿಯೇ ಇದೆ. ವಿವಿಧೆಡೆ ಚದುರಿರುವ ವಿದ್ಯಾರ್ಥಿಗಳು ಅಲ್ಯುಮಿನಿ ಡೇ ನೆಪದಲ್ಲಿ ಮತ್ತೆ ಒಂದೆಡೆ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಘಕ್ಕೆ ಹೊಸ ಸದಸ್ಯರು ನೋಂದಾಯಿಸಿಕೊಳ್ಳಲು, ಸದಸ್ಯತ್ವ ನವೀಕರಣ ಮಾಡಿಕೊಳ್ಳಲು ಸಹಾ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿರುವ ಬಿಎಂಎಸ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಅಮೆರಿಕಾದಲ್ಲಿರುವ ಬಿಎಂಎಸ್ ಕಾಲೇಜಿನ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ(B.M.S.college of engineering, American Alumni Association, America) ಜಂಟಿಯಾಗಿ ಅಲ್ಯುಮಿನಿ ಡೇ ಹಾಗೂ ವಿದ್ಯಾರ್ಥಿ ವೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.20ರಂದು ಸಂಜೆ 5ಕ್ಕೆ ಆಯೋಜಿಸಲಾಗಿದೆ.

ಬಿಎಂಎಸ್ ಕಾಲೇಜಿನ ಶ್ರೀನಿವಾಸಯ್ಯ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. 1977ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಈಗ ಅಮೆರಿಕಾದಲ್ಲಿ ಪ್ರೊಫೆಸರ್ ಆಗಿರುವ ಡಾ.ವಿಜಯ್ ವಿಠ್ಠಲ್, 1966ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಹೆಚ್.ಪಿ.ಖಿಂಚಾ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು. ನ್ಯಾಯಮೂರ್ತಿ ಆರ್. ಗುರುರಾಜನ್, ಬಿಎಂಎಸ್ ಕಾಲೇಜಿನ ಕಾರ್ಯನಿರ್ವಾಹಕ ಮಂಡಳಿಯ ವಿವಿಧ ಮುಖಂಡರು ಸಮಾರಂಭಕ್ಕೆ ಹಾಜರಾಗುವರು.

ಒಟ್ಟು 30ಮಂದಿಗೆ ಈ ಸಂದರ್ಭದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಎಂ.ಕೃಷ್ಣಮೂರ್ತಿ. ಮೊಬೈಲ್ ಸಂಖ್ಯೆ : 99452 46028, ಇಮೇಲ್ : [email protected]

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ :
ಬಿಎಂಎಸ್ ಎನ್ನುವ ಪ್ರತಿಭೆಯ ಕಾರ್ಖಾನೆ!
ಬಿಎಂಎಸ್ 'ಹಿರಿಯ ವಿದ್ಯಾರ್ಥಿ' ಸಂಘ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X