ಶನಿವಾರ ವಿಧಾನಸೌಧದ ಅಂಗಳದಲ್ಲಿ 'ಜನತಾ ದರ್ಶನ'
ಬೆಂಗಳೂರು, ಡಿ.14 : ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಶನಿವಾರ(ಡಿ.15) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 2ಗಂಟೆ ವರೆಗೆ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಅಹವಾಲು ಸಮೇತ ಆಸಕ್ತರು ವಿಧಾನಸೌಧಕ್ಕೆ ತೆರಳಬಹುದು.
ಬೆಂಗಳೂರಿನ ಜನರ ಕಂಗೆಡಿಸಿರುವ ಅಕ್ರಮ ಸಕ್ರಮ ಯೋಜನೆ, ಹಿಂದಿ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ಸಮ್ಮತಿಸಿದ ವಿವಾದ, ತೀರದ ಬೀದಿನಾಯಿಗಳ ಕಾಟ, ಸಾಲದ ಬಿಎಂಟಿಸಿ ಬಸ್ ಗಳು, ಹಾಲಿನ ದರ ಹೆಚ್ಚಳದಿಂದಾದ ತೊಂದರೆ.. ಹೀಗೆ ಸಮಸ್ಯೆ ಏನೇ ಇರಲಿ, ರಾಜ್ಯಪಾಲರ ಅವಗಹನೆಗೆ ತರಲು ಇದು ಸುಸಂದರ್ಭ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications