ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಮೇಲಿಸಲಾಗದೆ ಗಲಿಬಿಲಿಗೊಳಗಾದ ಜಿಮೇಲ್ ಬಳಕೆದಾರರು

By Staff
|
Google Oneindia Kannada News

ನವದೆಹಲಿ, ಡಿ.14 : ಹುಡುಕುವಿಕೆಗಾಗಿ, ವಿಚಾರ ವಿನಿಮಯಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಗೂಗಲ್‌ನ ಜಿಮೇಲ್ ಬಳಕೆದಾರರಿಗೆ ಬುಧವಾರ ಅಚ್ಚರಿ ಕಾದಿತ್ತು. ಈಮೇಲ್ ನೋಡಲೆಂದು ಲಾಗಿನ್ ಆಗಲು ಪ್ರಯತ್ನಿಸಿದರೆ ಪಾಸ್‌ವರ್ಡ್ ತೆಗೆದುಕೊಳ್ಳುತ್ತಿರಲಿಲ್ಲ.

ನಂತರ ತಿಳಿದಿದ್ದೇನೆಂದರೆ, ಗುಂಪಿನಲ್ಲಿರುವ ಈಮೇಲ್ ಬಳಕೆದಾರರಿಗೆ ದಂಡಿಗಟ್ಟಲೆ ಕೆಲಸಕ್ಕೆ ಬಾರದ ಮೇಲ್ ಕಳಿಸುವವರನ್ನು ಮತ್ತು ಇತರ ದುರ್ಬಳಕೆದಾರರನ್ನು ಹದ್ದುಬಸ್ತಿನಲ್ಲಿಡಲು ಅನೇಕ ಈಮೇಲ್‌ಗಳನ್ನು ಗೂಗಲ್ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಯಾವ ಈಮೇಲ್‌ಗಳನ್ನು ನಿಷೇಧಿಸಬೇಕು, ಯಾವುದನ್ನು ನಿಷೇಧಿಸಬಾರದೆಂಬ ಗಲಿಬಿಲಿಗೆ ಗೂಗಲ್ ಒಳಗಾಗಿದ್ದಂತೂ ದಿಟ.

ಚರ್ಚಾವೇದಿಕೆ ಮತ್ತು ಸಹಾಯ ವಿಭಾಗವನ್ನು ನಿರ್ವಹಿಸುವ ಸಿಬ್ಬಂದಿ, ಸ್ಪಾಮ್ ಮಾಡದವರೂ ಕೂಡ ಇದರಿಂದ ಸಂಕಷ್ಟಕ್ಕೊಳಗಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಸಂಬಂಧಪಟ್ಟ ಇಂಜಿನಿಯರುಗಳು ಇದನ್ನು ಸರಿಪಡಿಸಲು ಮುಂದಾಗಿದ್ದಾರೆ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ಎಂದ ಸಂದೇಶವನ್ನೂ ಚರ್ಚಾವೇದಿಕೆ ಸಿಬ್ಬಂದಿ ನಂತರ ಪ್ರಕಟಿಸಿದ್ದಾರೆ.

ಕೆಲಗಂಟೆಗಳ ನಂತರ 'ಜಿಮೇಲ್ ಗೈಡ್' ಹೆಸರಿನಲ್ಲಿ ಮತ್ತೆ ಪ್ರತ್ಯಕ್ಷವಾದ ಆ ಸಿಬ್ಬಂದಿ, ಈಮೇಲ್ ಬಳಕೆಯ ನಿಯಮಗಳನ್ನು ಧಿಕ್ಕರಿಸಿದ ಬಳಕೆದಾರರನ್ನು ಸರಿಯಾಗಿ ಗುರುತಿಸದಿದ್ದರಿಂದ ಇಂಥ ಅವಘಡ ಸಂಭವಿಸಿದೆ. ಈ ಎಲ್ಲ ಸರಿಯಾಗಿದೆ ಎಂಬ ಇನ್ನೊಂದು ಸಂದೇಶವನ್ನು ಪ್ರಕಟಿಸಿದರು.

ಸ್ಪಾಮ್ ಮಾಡುವವರ ಮೇಲೆ ದಿಗ್ಬಂಧನ ಹೇರುವ ಪ್ರಕ್ರಿಯೆಯಲ್ಲಿ ಇತರರ ಈಮೇಲ್‌ಗಳನ್ನೂ ತಪ್ಪಾಗಿ ನಿರ್ಬಂಧಿಸಲಾಯಿತು. ಈಗ ಬಳಕೆದಾರರು ಮೇಲ್‌ಬಾಕ್ಸನ್ನು ಪ್ರವೇಶಿಸಬಹುದು. ಅವರ ಯಾವುದೇ ದತ್ತ ನಾಶವಾಗಿಲ್ಲ ಎಂಬ ಸಂದೇಶವನ್ನು ಸ್ಪಲ್ಪ ಸಮಯದ ನಂತರ ಪ್ರಕಟಿಸಿದರು.

(ಏಜೆನ್ಸಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X