ಮಗನ ನೋವು ನೋಡಲಾಗದೇ ನೇಣಿಗೆ ಶರಣಾದ ಮಾತೆ!
ಬೆಂಗಳೂರು, ನ.17 : ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ನೋವನ್ನು ಕಣ್ಣಾರೆ ನೋಡಲಾಗದ ತಾಯೊಬ್ಬಳು, ನೇಣಿಗೆ ಶರಣಾಗಿದ್ದಾಳೆ. ಹೀಗೆ ಆತ್ಮಹತ್ಯೆ ಮಾಡಿಕೊಂಡದ್ದು; ಯಶವಂತಪುರದ ಅಂಬಿಕಾ(23).
ಗಿರೀಶ್ ಮತ್ತು ಅಂಬಿಕಾ ದಂಪತಿಗಳ ಏಕೈಕ ಪುತ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ಎರಡು ವರ್ಷದ ಆ ಮಗು ಜ್ವರ, ಶೀತದಿಂದ ಬಳಲುತ್ತಿದ್ದ. ಆ ಮಗು ಈ ಹಿಂದೆಯೂ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇತ್ತು. ಆ ಸಂದರ್ಭದಲ್ಲೆಲ್ಲ ಅಂಬಿಕಾ ನೋವನ್ನು ಅನುಭವಿಸಿದ್ದಳು.
ಮೊನ್ನೆ ಬಂದಿದ್ದ ಜ್ವರ ಇಳಿದಿರಲಿಲ್ಲ. ಮಗುವಿನ ನರಳಾಟ ನೋಡಲಾಗದೇ, ಅಂಬಿಕಾ ನೇಣಿಗೆ ಶರಣಾದಳು. ಅದಕ್ಕೂ ಮುನ್ನ ಮಗುವಿನ ಆರೋಗ್ಯದ ವಿಷಯದಲ್ಲಿ ಗಿರೀಶ್ ಮತ್ತು ಅಂಬಿಕಾ ನಡುವೆ ಪುಟ್ಟ ಜಗಳ ನಡೆದಿತ್ತು ಎನ್ನಲಾಗಿದೆ. ಇವರಿಬ್ಬರೂ ಮದುವೆಯಾಗಿ ಐದು ವರ್ಷಗಳಾಗಿದ್ದು, ದಂಪತಿಗಳ ಮಧ್ಯೆ ಯಾವುದೇ ಗಂಭೀರ ಭಿನ್ನಾಭಿಪ್ರಾಯಗಳಿರಲಿಲ್ಲ ಎಂದು ಅಂಬಿಕಾ ಮನೆಯವರು ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications