4ಹೆಲಿಪ್ಯಾಡ್ ನಿರ್ಮಾಣ : ಟ್ರಾಫಿಕ್ ಕಿರಿಕ್ಕಿಗೆ ಸಣ್ಣ ಬ್ರೇಕ್
ನವದೆಹಲಿ, ನ.17 : ಬೆಂಗಳೂರಿನಲ್ಲಿ ಇನ್ನೂ ನಾಲ್ಕು ನೂತನ ಹೆಲಿಪ್ಯಾಡ್ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈ ಪರಿಣಾಮ ಬೆಂಗಳೂರಿನ ಟ್ರಾಫಿಕ್ ಕಿರಿಕ್ ತುಸು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡುತ್ತಿದ್ದ ಅವರು, ಎಲೆಕ್ಟ್ರಾನಿಕ್ ಸಿಟಿ, ಅರಮನೆ ಮೈದಾನ, ಹೆಚ್ಎಎಲ್ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನೂತನ ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ನಗರಕ್ಕೆ ಆಗಮಿಸುವ ಗಣ್ಯರು, ಟ್ರಾಫಿಕ್ ಕಿರಿಕಿರಿಗೆ ಒಳಗಾಗುವುದು ತಪ್ಪಲಿದೆ ಎಂದರು.
ಮಿನಿ ವಿಮಾನ ನಿಲ್ದಾಣಗಳ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗ ಹಾಗೂ ಗುಲ್ಬರ್ಗದಲ್ಲಿ ಇವು ತಲೆ ಎತ್ತಲಿವೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2008ರ ಮಾರ್ಚಿಯಿಂದ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
(ಏಜನ್ಸೀಸ್)












Click it and Unblock the Notifications