ದೇವೇಗೌಡರ ಎರಡು ಡಜನ್ ಷರತ್ತುಗಳು ಏನು? ಏನೇನು?

ಹೆಚ್.ಡಿ.ದೇವೇಗೌಡಬೆಂಗಳೂರು, ನ.17 : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಸಮಯ ನೋಡಿ ಬಿಜಿಪಿಯ ಮೇಲೆ ಪ್ರಯೋಗಿಸಿದ್ದಾರೆ. 21ಕರಾರುಗಳ ಮೂಲಕ ಗೌಡರು ಹೊಸ ತಕರಾರು ಸೃಷ್ಟಿಸಿದ್ದಾರೆ. ಇದು ಬಿಜೆಪಿ ಪಾಲಿಗೆ ತೂಗುಕತ್ತಿಯಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.

ಶನಿವಾರ(ನ.17) ರಾತ್ರಿಯೊಳಗೆ ಈ ಕರಾರುಗಳಿಗೆ ಒಪ್ಪಿಗೆ ನೀಡಬೇಕೆಂದು ಜೆಡಿಎಸ್ ವರಿಷ್ಠರು ಬಿಜೆಪಿಗೆ ಗಡುವು ನೀಡಿದ್ದಾರೆ. ಹಾಗಾಗಿ ಇದು ಇಪ್ಪತ್ತೊಂದು ಪ್ಲಸ್ ಮತ್ತೊಂದು ಷರತ್ತಾಗಿದೆ. ಆದರೆ ಬಿಜೆಪಿ ಈ ಷರತ್ತುಗಳನ್ನು ಒಪ್ಪಲು ಸಿದ್ಧವಿಲ್ಲ. ಷರತ್ತು ಒಪ್ಪದಿದ್ದರೇ, ಬೆಂಬಲ ವಾಪಸ್ ಪಡೆಯುವುದಾಗಿ ದೇವೇಗೌಡರು ಬೆದರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಕೆಳಕಂಡ ಅಧಿಕೃತ ಷರತ್ತುಗಳಿಗೆ ಬಿಜೆಪಿ ಸಮ್ಮತಿಸಿದರೇ, ಅನಧಿಕೃತವಾಗಿ ಇನ್ನಷ್ಟು ಷರತ್ತುಗಳನ್ನು ಹಾಕಲು ದೇವೇಗೌಡ ಚಿಂತನೆ ನಡೆಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದೇವೇಗೌಡರ ಕರಾರುಗಳು :

1. ಮುಖ್ಯಮಂತ್ರಿ ಹುದ್ದೆಯಲ್ಲಿ ಯಡಿಯೂರಪ್ಪ ಅವರೇ ಮುಂದುವರಿಯ ಬೇಕು.

2. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ.

3. ಉಭಯ ಪಕ್ಷಗಳ ವರಿಷ್ಠರು ಸಮಾಲೋಚಿಸಿ ಖಾತೆಗಳನ್ನು ಹಂಚಿಕೆ ಮಾಡಿಕೊಳ್ಳಬೇಕು.

4. ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಮಾಜದ ಎಲ್ಲಾ ವರ್ಗಗಳಿಗೂ ರಕ್ಷಣೆ ನೀಡಬೇಕು.

5. ಎರಡೂ ಪಕ್ಷಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ಪರಸ್ಪರ ಸಾರ್ವಜನಿಕವಾಗಿ ಆರೋಪ ಮಾಡುವಂತಿಲ್ಲ.

6. ಒಂದು ವೇಳೆ ವಿವಾದಗಳು ತಲೆದೋರಿದರೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯವರ ಬಳಿ ಪ್ರಸ್ತಾಪಿಸಬೇಕು.

7. ಯಡಿಯೂರಪ್ಪ ಅವರೇ ಕರ್ನಾಟಕ ಅಭಿವೃದ್ಧಿ ರಂಗದ ಅಧ್ಯಕ್ಷರಾಗಿರುತ್ತಾರೆ.

8. ಬಿಜೆಪಿ, ಜೆಡಿಎಸ್ ಸಮನ್ವಯ ಸಮಿತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅಧ್ಯಕ್ಷರಾಗಿರುತ್ತಾರೆ.

9. ಉಭಯ ಪಕ್ಷಗಳ ಮುಖಂಡರು, ಅಧ್ಯಕ್ಷರು ಸಾರ್ವಜನಿಕವಾಗಿ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುವಂತಿಲ್ಲ. ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚಿಸಬೇಕು.

10. ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ವಿಷಯಗಳಲ್ಲಿ ಉಪ ಮುಖ್ಯಮಂತ್ರಿ ಜತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿಯವರು ಅಂತಿಮ ನಿರ್ಧಾರ ಕೈಗೊಳ್ಳಬಹುದು.

11. ಈ ಹಿಂದೆ ಸಚಿವ ಸಂಪುಟ ಕೈಗೊಂಡಿರುವ ಯೋಜನೆಗಳನ್ನು ಬದಲಿಸುವಂತಿಲ್ಲ. ಪರಸ್ಪರ ಸಹಮತ ವ್ಯಕ್ತವಾದಲ್ಲಿ ಮಾತ್ರ ಬದಲಾವಣೆ/ರದ್ದಿಗೆ ಅವಕಾಶ.

12. ಗಣಿ ಮತ್ತು ಭೂವಿಜ್ಞಾನ ಖಾತೆ ಜೆಡಿಎಸ್‌ಗೂ, ಅಬಕಾರಿ ಖಾತೆಯನ್ನು ಬಿಜೆಪಿಗೂ ಮುಂದಿನ 20 ತಿಂಗಳಿಗೆ ನಿಗದಿಗೊಳಿಸುವುದು.

13. ನಗರಾಭಿವೃದ್ಧಿ ಖಾತೆ ಬಿಜೆಪಿಗೆ. ನೈಸ್, ಬಿಡಿಎ ಮತ್ತು ಬೆಂಗಳೂರು ನಗರ ಒಲಗೊಂಡಂತೆ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಉಪ ಮುಖ್ಯಮಂತ್ರಿಗೆ.

14. ನಗರಾಭಿವೃದ್ಧಿ ಖಾತೆಗೆ ಬದಲಾಗಿ ಬಿಜೆಪಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳು.

15. ವಿಧಾನಸಭೆ ಸ್ಪೀಕರ್ ಹುದ್ದೆ ಜೆಡಿಎಸ್‌ಗೆ, ಉಪಾಧ್ಯಕ್ಷರ ಹುದ್ದೆ ಬಿಜೆಪಿಗೆ.

16. ವಿಧಾನಪರಿಷತ್ ಸಭಾಪತಿ ಹುದ್ದೆ ಬಿಜೆಪಿಗೆ. ಉಪ ಸಭಾಪತಿ ಹುದ್ದೆ ಜೆಡಿಎಸ್‌ಗೆ. ಇದಕ್ಕೆ ಪೂರಕವಾಗಿ ಖಾಲಿ ಇರುವ ವಿಧಾನಪರಿಷತ್ತಿನ ಐದು ಸ್ಥಾನಗಳನ್ನು ಭರ್ತಿ ಮಾಡುವುದು.

17. ಪರಿಷತ್ತಿನ ಐದು ಸ್ಥಾನಗಳಲ್ಲಿ ಬಿಜೆಪಿ, ಜೆಡಿಎಸ್‌ಗೆ ತಲಾ ಎರಡೆರಡು. ಉಳಿದ ಸ್ಥಾನಕ್ಕೆ ದೊರೈರಾಜು ಅವರನ್ನು ಆಯ್ಕೆ ಮಾಡುವುದು.

18. ಜೆಡಿಎಸ್‌ಗೆ 18, ಬಿಜೆಪಿಗೆ 16 ಸಚಿವ ಸ್ಥಾನ. ಈ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ.

19. ನಿಗಮ, ಮಂಡಳಿ ಅಧ್ಯಕ್ಷ ಹಾಗೂ ಉಪಧ್ಯಾಕ್ಷ ಸ್ಥಾನಗಳನ್ನು 55:45 ಅನುಪಾತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಂಚಿಕೆ ಮಾಡಿಕೊಳ್ಳುವುದು.

20. ಅಲ್ಪಸಂಖ್ಯಾತ, ಹಜ್, ವಕ್ಫ್ ಖಾತೆಗಳು ಜೆಡಿಎಸ್ ಪಾಲಿಗೆ. ಧಾರ್ಮಿಕ ದತ್ತಿ, ಮುಜರಾಯಿ ಖಾತೆಗಳು ಬಿಜೆಪಿಗೆ ಮೀಸಲು.

21. ಬಿಜೆಪಿಗೆ ಹೆಚ್ಚುವರಿಯಾಗಿ 4 ನಿಗಮ/ಮಂಡಳಿ ಬಿಟ್ಟುಕೊಡಲಾಗುವುದು ಎಂದು ಗೌಡರು ಹೇಳಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+