ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲಕ್ಕೆ ನಿಂತ ಚಿದಾನಂದಮೂರ್ತಿ
ಬೆಂಗಳೂರು, ನ.14 : ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ವನ್ನು ಕೋಮುವಾದಿ ಎಂದು ದೂರುವುದು ಸಲ್ಲದು. ಬಿಜೆಪಿ, ಆರೆಸ್ಸೆಸ್ ಅಥವಾ ಬಜರಂಗದಳ ಕೋಮುವಾದಿ ಸಂಘಟನೆಗಳಲ್ಲ ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು ತಮ್ಮ ವಿಚಾರಗಳನ್ನು ತಿಳಿಸಿದ್ದು, ಆರೆಸ್ಸೆಸ್ ಹಿಂದೂ ಧರ್ಮವನ್ನು ಎತ್ತಿ ಹಿಡಿದಿದೆಯೇ ಹೊರತು, ಅನ್ಯ ಧರ್ಮವನ್ನು ದ್ವೇಷಿಸಿಲ್ಲ. ಪ್ರಚೋದಕ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯನ್ನು ಟೀಕಿಸುವುದೇ ಜಾತ್ಯತೀತತೆಯ ಲಕ್ಷಣ ಎಂದು ಕೆಲವರು ಭಾವಿಸಿದ್ದಾರೆ. ಆರೆಸ್ಸೆಸ್ ಸೌಹಾರ್ದಯುತವಾದ ದೇಶ ಕಟ್ಟುವ ಕನಸನ್ನು ಹೊಂದಿದೆ ಎಂದು ಚಿದಾನಂದಮೂರ್ತಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications