ಕಾಂಗ್ರೆಸ್ ಅದಲುಬದಲು ಆಟ : ಕೃಷ್ಣ ಭೈರೇಗೌಡಗೆ ಮಣೆ

ಬೆಂಗಳೂರು, ನ.14 : ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ರಾಜ್ಯ ಕಾಂಗ್ರೆಸ್ ತಲ್ಲಣಗೊಂಡಿದೆ. ಪಕ್ಷದ ನಾಯಕರಲ್ಲಿ ಸೋತ ಕಳೆ. ಪಕ್ಷದ ಸಂಘಟನೆಗೆ ಕಾಂಗ್ರೆಸ್ ಹೈಕಮಾಂಡ್ ಈಗ ನಿಗಾವಹಿಸಿದೆ. ಮೊದಲ ಹಂತದಲ್ಲಿ ವೇಮಗಲ್ ಕ್ಷೇತ್ರದ ಶಾಸಕ ಕೃಷ್ಣ ಭೈರೇಗೌಡ ಅವರನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಕುರ್ಚಿಗೆ ಎಐಸಿಸಿ ಕೂರಿಸಿದೆ.

ಕಳೆದ ಐದು ತಿಂಗಳಿಂದ ಈ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ ಡಂಗನವರ್ ಅವರನ್ನು ಕೆಳಗಿಳಿಸಿ, ಕೃಷ್ಣ ಭೈರೇಗೌಡ ಅವರನ್ನು ಆ ಸ್ಥಾನಕ್ಕೆ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ.

ಮಾಜಿ ಸಚಿವ ದಿವಗಂತ ಸಿ.ಭೈರೇಗೌಡ ಅವರ ಪುತ್ರ ಕೃಷ್ಣ, ಬಿಇ ಪದವೀಧರರು. ಅಮೆರಿಕದಲ್ಲಿ ಉದ್ಯೋಗ ನಿರತರಾಗಿದ್ದ ಇವರು, ತಮ್ಮ ತಂದೆಯ ನಿಧನ ನಂತರ, ರಾಜಕೀಯ ಪ್ರವೇಶ ಮಾಡಿದವರು. ಮೊದಲು ಪ್ರಗತಿಪರ ಜನತಾದಳದಲ್ಲಿದ್ದರು, ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+