ಕುಮಾರನಂಥವ್ರಿಗೆ ಮಗಳಾದರೇನು;ಹೆಣ್ತನವಷ್ಟೇ ಮುಖ್ಯ!

ಬೆಂಗಳೂರು, ನ.14 : ನಾಗರಿಕರನ್ನು ಕಂಗೆಡಿಸುವ ಅಕ್ರಮ ಸಂಬಂಧದ ಪ್ರಕರಣವೊಂದು ನಗರದಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಕೆ.ಆರ್.ಪುರ ಪೊಲೀಸರು ಮಗಳನ್ನೇ ಮದುವೆಯಾಗಲು ಯತ್ನಿಸಿದ ಆಸಾಮಿ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಏನಿದು ಅಸಹ್ಯ ಮತ್ತು ಅಮಾನವೀಯತೆಯ ಕತೆ? : ಆನಂದಪುರ ನಿವಾಸಿ ಕುಮಾರ ಹಾಗೂ ಅವನ ಪ್ರಿಯತಮೆ ಅಕ್ರಮ ಸಂಬಂಧವನ್ನು ಹೊಂದಿದ್ದರು. ಅವರಿಗೆ ಒಂದು ಹೆಣ್ಣು ಮಗುವೂ ಜನಿಸಿತ್ತು. ಮಗುವನ್ನು ಬೇರೆಕಡೆ ಇಟ್ಟು ಕುಮಾರ, ಪ್ರಿಯತಮೆಯೊಂದಿಗೆ ಕೆ.ಆರ್.ಪುರದಲ್ಲಿ ತನ್ನ ಸಂಬಂಧವನ್ನು ಮುಂದುವರಿಸಿದ್ದ.

ಈಗ ಬಾಲಕಿಗೆ 16ವರ್ಷ ವಯಸ್ಸು. ಆಕೆಯನ್ನು ಕಂಡ ಕುಮಾರ, ತಾನೇ ಮದುವೆಯಾಗುವುದಾಗಿ ಹೇಳಿದ. ಮದುವೆಗೆ ಒಪ್ಪುವಂತೆ ತನ್ನ ಪ್ರಿಯತಮೆಗೆ(ಬಾಲಕಿಯ ತಾಯಿ) ದುಂಬಾಲುಬಿದ್ದ. ಮದುವೆ ಮಾಡದಿದ್ದರೆ ಇಬ್ಬರನ್ನೂ ಮನೆಯಿಂದ ಹೊರಹಾಕುವುದಾಗಿ ಬೆದರಿಸಿದ. ಇದರಿಂದ ಭಯಗೊಂಡ ಬಾಲಕಿಯ ತಾಯಿ, ಮಗಳ ಮೇಲೆ ಒತ್ತಡ ತರಲು ಪ್ರಯತ್ನಿಸಿದಳು.

ಹೀಗೆ ಮಗಳ ಮೇಲೆ ಕಳೆದ ಎರಡು ತಿಂಗಳಿಂದ ಮದುವೆಯಾಗುವಂತೆ ಕುಮಾರ ಒತ್ತಾಯ ಮಾಡುತ್ತಲೇ ಇದ್ದ. ಒತ್ತಡ ಮಿತಿಮೀರಿದಾಗ ಆಕೆ ಮಾನಸಿಕ ಆಘಾತಕ್ಕೆ ಒಳಗಾಗಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದಳು. ಆಗ ಕುಮಾರನ ಬಣ್ಣಬಯಲಾಯಿತು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+