ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಪ್‌ಟಾಪೇ ಬೇರೆ, ಡೆಸ್ಕ್‌ಟಾಪೇ ಬೇರೆ : ಸು.ಕೋರ್ಟ್

By Staff
|
Google Oneindia Kannada News

Laptopನವದೆಹಲಿ, ನ. 12 : ಲ್ಯಾಪ್‌ಟಾಪ್ ಕೊಂಡ್ಕೋಬೇಕು ಆದರೆ ತೆರಿಗೆ ಹೆಚ್ಚು ಎಂದು ತುಂಬಾ ದಿವಸಗಳಿಂದ ಲೆಕ್ಕಾಚಾರ ಹಾಕುತ್ತಿದ್ದವರಿಗೆ ಚೂರು ಗುಡ್ ನ್ಯೂಸ್. ಭಾರತದ ಸರ್ವೋಚ್ಛ ನ್ಯಾಯ್ಯಾಲಯದಿಂದ ಹೊರಬಿದ್ದಿರುವ ಮಹತ್ವದ ತೀರ್ಪಿನ ಪ್ರಕಾರ ತೆರಿಗೆಗಳ ದೃಷ್ಟಿಯಿಂದ ಲ್ಯಾಪ್‌ಟಾಪ್ ಬೆಲೆ ನೀವು ಅಂದುಕೊಂಡಷ್ಟು ದುಬಾರಿ ಎನಿಸುವುದಿಲ್ಲ.

ಡೆಸ್ಕ್‌ಟಾಪ್ ಕಂಪ್ಯೂಟರ್ ಮೇಲೆ ವಿಧಿಸಲಾಗಿರುವಂತೆ ಲ್ಯಾಪ್‌ಟಾಪ್ ಮೇಲೂ ಶೇ.7ರಷ್ಟು ಹೆಚ್ಚುವರಿ ಕಸ್ಟಮ್ಸ್ ಡ್ಯೂಟಿಯನ್ನು ಸರಕಾರ ಹೇರುವ ಹಾಗಿಲ್ಲ ಎನ್ನುವುದೇ ನ್ಯಾಯಾಲಯದ ತೀರ್ಪು. ಲ್ಯಾಪ್‌ಟಾಪೇ ಬೇರೆ, ಡೆಸ್ಕ್‌ಟಾಪೇ ಬೇರೆ ಎಂದಿದೆ ನ್ಯಾಯಾಲಯ. ಸಹಜವಾಗಿಯೇ ಈ ತೀರ್ಪು ಐಟಿ ಕಂಪನಿಗಳು ಮತ್ತು ಬಳಕೆದಾರರಿಗೆ ಏಕಕಾಲಕ್ಕೆ ಸಂತಸತಂದಿದೆ.

ಲ್ಯಾಪ್‌ಟಾಪ್ ಗಳ ಮೇಲೂ ಶೇ. 7ರಷ್ಟು ಹೆಚ್ಚುವರಿ ಡ್ಯೂಟಿ ಹಾಕಬೇಕು ಎಂಬ ಕಸ್ಟಮ್ಸ್ ಆಯುಕ್ತರ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಸ್. ಬಿ. ಸಿನ್ಹಾ ಈ ಮೇಲಿನ ತೀರ್ಪನ್ನು ಕೊಟ್ಟಿದ್ದಾರೆ. ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಎರಡೂ ಮಾಡುವ ಕೆಲಸಗಳು ಒಂದೇ ಆದರೂ ಕೂಡ ಅವುಗಳನ್ನು ಬೇರೇಬೇರೇಯಾಗಿಯೇ ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಸುಮ್ನೆ ತಮಾಷೆಗೆ-
ಕಂಪ್ಯೂಟರ್‌ ಹೆಣ್ಣೆಂದಿರಾ, ಅನ್ಯಾಯ ಸಾರ್‌!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X