ನ.23ರಂದು ವಿಶ್ವಾಸಮತ ಯಾಚನೆ : ಯಾಕಿಷ್ಟು ದಿನ?
ಬೆಂಗಳೂರು, ನ.12 : ರಾಜ್ಯ ವಿಧಾನಸಭೆಯಲ್ಲಿ ನ.23ರಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದಾರೆ.
ಸುದ್ದಿಗಾರರ ಜೊತೆ ಸೋಮವಾರ(ನ.12) ಮಾತನಾಡುತ್ತಿದ್ದ ಯಡಿಯೂರಪ್ಪ, ತಮ್ಮ ಐವರು ನೂತನ ಸಚಿವರ ಚೊಚ್ಚಲ ಸಂಪುಟ ಸಭೆ ನಂತರ ಮಾತನಾಡುತ್ತ ಈ ವಿಚಾರ ತಿಳಿಸಿದರು. ಮುಂದಿನ ನಾಲ್ಕು ದಿನಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಸಂಪುಟ ಪ್ರವೇಶಿಸಲಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಶ್ವಾಸ ಮತ ಯಾಚನೆ ನಡೆಯಲಿದೆ ಎಂದರು.
ಎಲ್ಲ ವರ್ಗಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಲಿದೆ. ಅನಗತ್ಯ ಆತಂಕ ಬೇಡ ಎಂದು ಯಡಿಯೂರಪ್ಪ ಹೇಳಿದರು.
(ಯುಎನ್ಐ)












Click it and Unblock the Notifications