ಸೋಮವಾರ ಪ್ರಮಾಣ ವಚನ : ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ನ.09 : ರಾಜ್ಯಪಾಲರನ್ನು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಹೆಚ್.ಡಿ.ಕುಮಾರಸ್ವಾಮಿ ಇಂದು(ನ.09) ಭೇಟಿ ಮಾಡಲಿದ್ದಾರೆ. ಸರ್ಕಾರ ರಚನೆಗೆ ಆಹ್ವಾನ ನೀಡುವುದಾಗಿ ದೂರವಾಣಿಯಲ್ಲಿ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಗುರುವಾರವೇ ತಿಳಿಸಿದ್ದಾರೆ.
ಇಂದು ಸರ್ಕಾರ ರಚನೆಯ ರೂಪುರೇಷೆಗಳ ಬಗ್ಗೆ ಕುಮಾರಸ್ವಾಮಿ ಜೊತೆ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಆನಂತರ ಇಬ್ಬರೂ ನಾಯಕರು ರಾಜ್ಯಪಾಲರ ಭೇಟಿ ಮಾಡಲಿದ್ದಾರೆ. ಬಹುಶಃ ಸೋಮವಾರ(ನ.12) ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದೇನೆ ಎಂದಿರುವ ಯಡಿಯೂರಪ್ಪ, ಮುಂದಿನ 19ತಿಂಗಳ ಕಾಲ ಸುಭದ್ರ ಆಡಳಿತ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿ ಖಾತೆ ಹಂಚಿಕೆಯ ಲಾಭಿ ಆರಂಭಗೊಂಡಿದೆ. ದೆಹಲಿಯಿಂದ ಮರಳಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಗುರುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಡಗರದಿಂದ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ :
ಯಡಿಯೂರಪ್ಪ ಮುಖ್ಯಮಂತ್ರಿಯಾದ್ರೆ ರಾಮರಾಜ್ಯ ಬರುತ್ತಾ?












Click it and Unblock the Notifications