ಕನ್ನಡತಿಯನ್ನು ಸೊಸೆ ಮಾಡಿಕೊಂಡ ಮಹಾರಾಷ್ಟ್ರ ಸಿಎಂ!
ಮುಂಬಯಿ, ಅ.31 : ಬೆಳಗಾವಿ ವಿಚಾರದಲ್ಲಿ ತಂಟೆ ತಕರಾರು ಮಾಡಿ ತುಂಟತನ ಪ್ರದರ್ಶಿಸುವ ಮಹಾರಾಷ್ಟ್ರ ಮತ್ತದರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್, ಈಗ ಕನ್ನಡತಿಯನ್ನು ಸೊಸೆಯಾಗಿ ಪಡೆದು ಮನೆ ತುಂಬಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಉದ್ಯಮಿ ಪ್ರತಾಪ್ ಘೋರ್ಪಡೆ ಅವರ ಪುತ್ರಿ ಆದಿತಿ ಹಾಗು ದೇಶಮುಖ್‌ರ ಪುತ್ರ ಅಮಿತ್‌ರ ನಿಶ್ಚಿತಾರ್ಥ ಮುಂಬೈನಲ್ಲಿ ಇತ್ತೀಚೆಗೆ ನಡೆದಿದೆ. ದಕ್ಷಿಣ ಮುಂಬೈನ ತಾಜ್ ಹೋಟಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸಮೀಪದ ಬಂಧುಗಳು ಹಾಗೂ ಸಚಿವರು ಹಾಜರಿದ್ದರು.
ಪ್ರತಾಪ್ ಘೋರ್ಪಡೆ ಸಂಡೂರಿನ ರಾಜವಂಶಸ್ಥ ಎಂ.ವೈ.ಘೋರ್ಪಡೆ ಅವರ ಬಂಧು. ಅವರ ಪುತ್ರಿ ಆದಿತಿ ಕಿರುತೆರೆಯ ಅಭಿನೇತ್ರಿ. ವಿಲಾಸ್‌ರಾವ್‌ರ ಸುಪುತ್ರ ಅಮಿತ್, ಅವರ ರಾಜಕೀಯ ಉತ್ತರಾಧಿಕಾರಿ. ವಿವಾಹದ ದಿನಾಂಕಗಳು ಇನ್ನೂ ನಿರ್ಧಾರವಾಗಿಲ್ಲ.
ಕನ್ನಡಿಗರನ್ನು ಬ್ರಿಟಿಷರಿಗೆ ಹೋಲಿಸಿದ ಮಹಾರಾಷ್ಟ್ರ ಸಿಎಂ!
(ಏಜನ್ಸೀಸ್)












Click it and Unblock the Notifications