ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತನಾಗ್ ಸೇರಿದಂತೆ 51ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು, ಅ.29 : ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪತ್ರಕರ್ತ ನಾಗೇಶ್ ಹೆಗಡೆ ಸೇರಿದಂತೆ 51ಮಂದಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ನೀಡಲಾಗಿದೆ. ಪಟ್ಟಿ ಅಧಿಕೃತವಾಗಿ ಸೋಮವಾರ(ಅ.29) ಬಿಡುಗಡೆಯಾಗಿದೆ.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನೇತೃತ್ವದ ಸಮಿತಿ ಪ್ರಶಸ್ತಿಗೆ 51ಗಣ್ಯರನ್ನು ಆಯ್ಕೆ ಮಾಡಿದೆ. ಈಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿರುವ ಇನ್ನಿತರ ಪ್ರಮುಖರು : ಸರಜೂ ಕಾಟ್ಕರ್(ಪತ್ರಿಕೋದ್ಯಮ), ಡಾ.ವಿಜಯಾ(ಪತ್ರಿಕೋದ್ಯಮ), ಪಂಕಜ್ ಆಡ್ವಾಣಿ (ಕ್ರೀಡೆ), ಚಿ.ಶ್ರೀನಿವಾಸ ರಾಜು(ಸಾಹಿತ್ಯ), ಪೊನ್ನಪ್ಪ(ವ್ಯಂಗ್ಯಚಿತ್ರ), ಭುಜಂಗಯ್ಯ ಶೆಟ್ಟಿ(ವೈದ್ಯಕೀಯ), ಸಂಸ್ಕೃತ ವಿದ್ವಾಂಸ ಚಕ್ರವರ್ತಿ.

ಈ ಸಲದ ರಾಜ್ಯೋತ್ಸವ ಪ್ರಶಸ್ತಿಗಾಗಿ 300ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ :

ಸಾಹಿತ್ಯ ಕ್ಷೇತ್ರ :
ಸುಮಿತ್ರಾ ಗಾಂಧಿ ಕುಲಕರ್ಣಿ(ಬೆಂಗಳೂರು)
ಡಾ. ಸಿ,ಎನ್ ,ರಾಮಚಂದ್ರನ್ (ಮೈಸೂರು)
ಪ್ರೋ.ಸಿ. ಶ್ರೀನಿವಾಸರಾಜು (ಚಿಕ್ಕಬಳ್ಳಾಪುರ)
ಡಾ. ಮ.ನ.ಜವರಯ್ಯ (ಮೈಸೂರು)
ಟಿ.ಎನ್ .ಚಕ್ರವರ್ತಿ(ಮೈಸೂರು)

ಚಲನಚಿತ್ರ ಕ್ಷೇತ್ರ :
ಪಾರ್ವತಮ್ಮ ರಾಜಕುಮಾರ್
ಅನಂತನಾಗ್
ಸುರೇಶ್ ಅರಸ್ (ಚೆನ್ನೈ)

ಪತ್ರಿಕೋದ್ಯಮ ಕ್ಷೇತ್ರ :
ನಾಗೇಶ್ ಹೆಗಡೆ (ಬೆಂಗಳೂರು)
ಟಿ.ಜೆ.ಎಸ್. ಜಾರ್ಜ್ (ಬೆಂಗಳೂರು)
ಡಾ. ಸರಜು ಕಾಟ್ಕರ್ (ಬೆಳಗಾವಿ)
ಪೊನ್ನಪ್ಪ (ಕೊಡಗು)
ಅಬ್ದುಲ್ ಕಾಲಿಕ್ (ಬೆಂಗಳೂರು)

ರಂಗಭೂಮಿ ಕ್ಷೇತ್ರ :
ಲಾಡಾ ಸಾಹೇಬ್ ಅಮೀನ್ ಗಡ (ಬಳ್ಳಾರಿ)
ಸರೋಜಮ್ಮ ಪಿ. ದುಸ್ತರಗಿ (ಕೊಪ್ಪಳ)

ಸಂಗೀತ ಕ್ಷೇತ್ರ :
ಶೇಷಪ್ಪ ಗಬ್ಬೂರು (ರಾಯಚೂರು)
ಬಸಪ್ಪ. ಎಚ್ .ಬಂಜತ್ರಿ (ಬಾಗಲಕೋಟೆ)
ಗೌರಂಗ್ ಕೋಡಿಕಲ್ (ಬೆಂಗಳೂರು)

ನೃತ್ಯ ಕ್ಷೇತ್ರ :
ಮಾಸ್ಟರ್ ವಿಠ್ಠಲ್ ಶೆಟ್ಟಿ (ಮಂಗಳೂರು)
ಗೀತಾ ದಾತಾರ್ (ಶಿವಮೊಗ್ಗ)

ಜಾನಪದ :
ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ(ಗುಲ್ಬರ್ಗಾ)
ಹೊನ್ನಮ್ಮ (ಬೆಂಗಳೂರು ಗ್ರಾಮಾಂತರ)
ಸೈಯದ್ ಸಾಬ್ ಲಾಡಕನ್ (ಬಾಗಲ ಕೋಟೆ)
ಮಾತಾರ್ ಗೋಪಾಲ್ ನಾಯಕ್ (ಬೆಳ್ತಂಗಡಿ ತಾ.)

ಸಮಾಜ ಸೇವೆ ಕ್ಷೇತ್ರ :
ಶ್ರೀ ಶಂಕರ್ ಫ್ಯಾಮಿಲಿ ಟ್ರಸ್ಟ್ಸ್ (ಉಡುಪಿ)
ವೈ. ಎಂ.ಎಸ್. ಶರ್ಮ (ಬೆಂಗಳೂರು)
ಎಂ.ಜಿ. ಬೋಪಯ್ಯ (ಬೆಂಗಳೂರು)
ಟಿ.ವಿ.ನಾರಾಯಣ ಶಾಸ್ತ್ರಿ(ಶಿವಮೊಗ್ಗ)
ಮುಲ್ ಚಂದ್ ನಹಾರ್ (ಬೆಂಗಳೂರು)

ಸಂಶೋಧನೆ ಕ್ಷೇತ್ರ :
ಡಾ. ಅ. ಸುಂದರ್ (ಶಿವಮೊಗ್ಗ)
ಟಿ.ಎನ್ .ಶಂಕರ ಭಟ್ (ದಕ್ಷಿಣ ಕನ್ನಡ)
ಪ್ರೊ. ಕೆ.ಟಿ. ಪಾಂಡುರಂಗಿ (ಬೆಂಗಳೂರು)
ಶ್ರೀನಿವಾಸರೆಡ್ಡಿ (ಧಾರವಾಡ)

ಹೊರನಾಡ ಕನ್ನಡಿಗರು :
ಡಾ.ಎಚ್. ವೈ .ರಾಜಗೋಪಾಲ್ (ಅಮೆರಿಕ)
ಶೇಖರ್ ಬಾಬು ಶೆಟ್ಟಿ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X