ರಾಜ್ಯಪಾಲರೇ ಈಗ ತಲೆ ಎಣಿಸಿ ; ನಮ್ಮನ್ನು ಆಹ್ವಾನಿಸಿ
ಬೆಂಗಳೂರು, ಅ.29 : ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಇದೀಗ(ಅ.29ರ ಸಂಜೆ 5ಗಂಟೆ) ರಾಜಭವನ ಪ್ರವೇಶಿಸಿದ್ದಾರೆ. ರಾಜ್ಯಪಾಲರ ಎದುರು ಬಲಾಬಲ ಪ್ರದರ್ಶಿಸಿ, ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಒತ್ತಡ ತರುವುದು ಉಭಯ ಪಕ್ಷಗಳ ಉದ್ದೇಶ.
ಪೂರಕ ಬಹುಮತವನ್ನು ನಾವು ಹೊಂದಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದ್ದು, ಜೆಡಿಎಸ್ ನ ಎಷ್ಟು ಸದಸ್ಯರು ಬೆಂಬಲ ನೀಡಿದ್ದಾರೆ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ. ಪ್ರಕಾಶ್ ಜೊತೆ ಗುರ್ತಿಸಿಕೊಂಡಿದ್ದ ಕೆಲವು ಶಾಸಕರು ಕುಮಾರಸ್ವಾಮಿ ಜೊತೆಗೆ ಬಂದಿದ್ದಾರೆ. ಈ ಮಧ್ಯೆ ಪ್ರಕಾಶ್ ಮನವೊಲಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಪಕ್ಷ ಬಿಡುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿರುವ ಎಂ.ಪಿ.ಪ್ರಕಾಶ್, ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಆಹ್ವಾನ ನೀಡದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳಗ್ಗೆ ನಡೆಯಬೇಕಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಜಂಟಿ ಸಭೆ ಇಂದು ಸಂಜೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಒಟ್ಟು 124 ಶಾಸಕರ ಮೆರವಣಿಗೆ, ಮುಂದೇನು ?












Click it and Unblock the Notifications