ಒಟ್ಟು 129 ಶಾಸಕರ ಮೆರವಣಿಗೆ,ಮುಂದೇನು ?

ಬೆಂಗಳೂರು, ಅ.29 : ಸೋಮವಾರ ಸಂಜೆ ಸಭೆ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಸಕರು, ಬಿ.ಎಸ್.ಯಡ್ಡಿಯೂರಪ್ಪ ಅವರನ್ನು ಉಭಯ ಪಕ್ಷಗಳ ಶಾಸಕರ ನಾಯಕನನ್ನಾಗಿ ಆಯ್ಕೆ ಮಾಡಿವೆ.

ಬಿಜೆಪಿಯ 79 ಶಾಸಕರು ಮತ್ತು ಜೆಡಿಎಸ್ ಪಕ್ಷದ 45 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಜೊತೆಗೆ ಇತರೇ ಶಾಸಕರು ಸೇರಿದಂತೆ ಒಟ್ಟು 129 ಶಾಸಕರು ರಾಜ್ಯಪಾಲರ ಎದುರು ಯಡಿಯೂರಪ್ಪ ಪರವಾಗಿ ಪರೇಡ್ ನಡೆಸಿ, ಸಂಖ್ಯಾಬಲವನ್ನು ಸೋಮವಾರ ಸಂಜೆ ಸಾಬೀತು ಪಡಿಸಿದ್ದಾರೆ. ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಉಭಯ ಪಕ್ಷಗಳು ಒತ್ತಾಯಿಸಿವೆ.

ಸೋಮವಾರ ರಾಜಕೀಯ ಚಿತ್ರಣ :

  • ಎಂ.ಪಿ.ಪ್ರಕಾಶ್ ಮನವೊಲಿಸಲು ಎರಡು ಸುತ್ತಿನ ಮಾತುಕತೆ. ಪಟ್ಟು ಬಿಡದ ಪ್ರಕಾಶ್.ತಣ್ಣಗಾಗದ ಸಿಟ್ಟು.
  • ಅಗತ್ಯ ಶಾಸಕರನ್ನು ಕರೆದುಕೊಂಡು ಜೆಡಿಎಸ್ ನಿಂದ ಸಿಡಿದು ಬಂದರೆ ಪ್ರಕಾಶ್ ಗೆ ಬೆಂಬಲ ನೀಡುವುದಾಗಿ ಧರ್ಮಸಿಂಗ್ ಘೋಷಣೆ.
  • ಸೋನಿಯಾ ಗಾಂಧಿ ಚೀನಾ ಪ್ರವಾಸ ಮುಕ್ತಾಯ. ನವದೆಹಲಿಯಲ್ಲಿ ಕರ್ನಾಟಕದ ರಾಜ್ಯ ರಾಜಕೀಯದ ಚರ್ಚೆ.
  • ಸದಾಶಿವನಗರದ ಮಹದೇವ ಪ್ರಸಾದ್ ಮನೆಯಲ್ಲಿ ಎಂ.ಪಿ.ಪ್ರಕಾಶ್ ಬೆಂಬಲಿಗರ ಸಭೆ.
  • ದೇವೇಗೌಡ ಮತ್ತು ಕುಮಾರಸ್ವಾಮಿ ಮಾತುಕತೆ. ಸರ್ಕಾರ ರಚನೆಗೆ ಸಮ್ಮತಿ ಸೂಚಿಸಿ ರಾಜ್ಯಪಾಲರಿಗೆ ದೇವೇಗೌಡರಿಂದ ಇನ್ನೊಂದು ಪತ್ರ.
  • ರೆಸಾರ್ಟ್ ಬದಲಿಸಿದ ಜೆಡಿಎಸ್ ಶಾಸಕರು. ರೆಸಾರ್ಟ್ ನಿಂದಲೇ ನೇರವಾಗಿ ರಾಜಭವನಕ್ಕೆ ಜೆಡಿಎಸ್ ಶಾಸಕರ ಆಗಮನ.
  • ಯಾವುದೇ ಕಾರಣಕ್ಕೂ ನಾನು ಪಕ್ಷ ಒಡೆಯುವುದಿಲ್ಲ : ಎಂ.ಪಿ.ಪ್ರಕಾಶ್
  • ಸರ್ಕಾರ ರಚನೆಗೆ ಆಹ್ವಾನ ನೀಡದಂತೆ ರಾಜ್ಯಪಾಲರಿಗೆ ಎಂ.ಪಿ.ಪ್ರಕಾಶ್ ಮನವಿ.
  • ಬೆಂಗಳೂರಿನಲ್ಲಿ ಎಸ್.ಎಂ.ಕೃಷ್ಣ ಪ್ರತ್ಯಕ್ಷ. ಕಾಂಗ್ರೆಸ್ ವಲಯದಲ್ಲಿ ತೀವ್ರಗೊಂಡ ಸಭೆ, ಚರ್ಚೆ.
(ದಟ್ಸ್ ಕನ್ನಡ ವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+