ಶುಕ್ರವಾರ ನಟ ವಿನಾಯಕ ಜೋಶಿ ತಂಡದಿಂದ'ಹೋಳಿ'
ಬೆಂಗಳೂರು, ಅ.25 : ನಗರದ ರಂಗಶಂಕರದಲ್ಲಿ ರಂಗೋತ್ಸವ ನಡೆಯುತ್ತಿದೆ. ಇದರ ಒಂದು ಭಾಗವಾಗಿ ಶುಕ್ರವಾರ(ಅ.26)'ಹೋಳಿ'ನಾಟಕ ಪ್ರದರ್ಶನಗೊಳ್ಳಲಿದೆ.
'ಹೋಳಿ'ನಾಟಕವನ್ನು ವಿನಾಯಕ ಜೋಶಿ ಅವರ ಪಂಚಮುಖಿ ನಟರ ಸಮೂಹ ಪ್ರದರ್ಶಿಸಲಿದೆ. ಮುಂಬಯಿ ನಾಟಕರಂಗದ ಖ್ಯಾತ ನಿರ್ದೇಶಕ ಚೇತನ್ ದಾತಾರ್ ನಿರ್ದೇಶನದಲ್ಲಿ ನಾಟಕ ಮೂಡಿ ಬರಲಿದೆ. ಮಧ್ಯಾಹ್ನ 3:30ಕ್ಕೆ ಹಾಗೂ ಸಂಜೆ 7:30ಕ್ಕೆ ಎರಡು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇಹಂತ, ಬೆಂಗಳೂರು-78.
ಟೆಕೇಟ್ ಬೇಕಾದವರು ಸಂಪರ್ಕಿಸಿ : ವಿನಾಯಕ ಜೋಶಿ(ಮೊಬೈಲ್ ಸಂಖ್ಯೆ : 98867 19559)
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications