ಸುವರ್ಣ ಯುಗ ಪಕ್ಷಕ್ಕೆ ನ.14ರಂದು ಚಾಲನೆ: ಮಹಿಮಾ
ಬೆಂಗಳೂರು, ಅ.25 : ಜಾತ್ಯತೀತ ಜನತಾದಳಕ್ಕೆ ವಿದಾಯ ಹೇಳಿರುವ ಶಾಸಕ ಮಹಿಮಾ ಪಟೇಲ್, ನ.14ರಂದು ತಮ್ಮ ಹೊಸ ಪಕ್ಷ 'ಸುವರ್ಣ ಯುಗ'ಕ್ಕೆ ಚಾಲನೆ ನೀಡಲಿದ್ದಾರೆ.
ತುಮಕೂರಿಗೆ ಶ್ರೀ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಲು ಬಂದಿದ್ದ ಮಹಿಮಾ ಪಟೇಲ್ ಸುದ್ದಿಗಾರರ ಜೊತೆ ಮಾತನಾಡಿದರು. ಹೊಸ ಪಕ್ಷ ಸ್ಥಾಪನೆ ಸಂಬಂಧ ಆಪ್ತರೊಂದಿಗೆ ಅ.27ರಂದು ಚನ್ನಗಿರಿಯಲ್ಲಿ ಚರ್ಚೆ ನಡೆಸಲಿದ್ದೇನೆ. ತಲಕಾವೇರಿಯಲ್ಲಿ ಹೊಸ ಪಕ್ಷವನ್ನು ನ.14ರಂದು ಘೋಷಣೆ ಮಾಡಲಿದ್ದೇನೆ ಎಂದರು.
ಬಿಜೆಪಿಗೆ ಅಧಿಕಾರ ಹಸ್ತಾಂತರಿಸದ ಜೆಡಿಎಸ್ ನೀತಿಯಿಂದ ಮಹಿಮಾ ಅಸಮಾಧಾನಗೊಂಡಿದ್ದಾರೆ. ವಚನ ಭ್ರಷ್ಟ ಪಕ್ಷದಲ್ಲಿ ನಾನಿರಲಾರೆ ಎಂದು ಮಹಿಮಾ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಒಂದು ಸಮರ್ಥ ಪ್ರಾದೇಶಿಕ ಪಕ್ಷದ ಮುಖಾಂತರ, ರಾಜ್ಯದ ಅಭಿವೃದ್ಧಿಗೆ ಮುಂದಾಗುವುದು ಮಹಿಮಾ ಅವರ ಕನಸು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications