ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಾಣು ಕ್ಷೇತ್ರದಲ್ಲಿ ಸ್ವಾವಲಂಬನೆ: ಕಲಾಂ ಗೈಡ್ ಲೈನ್ಸ್

By Staff
|
Google Oneindia Kannada News

ಪರಮಾಣು ಕ್ಷೇತ್ರದಲ್ಲಿ ಸ್ವಾವಲಂಬನೆ: ಕಲಾಂ ಗೈಡ್ ಲೈನ್ಸ್ ಲಂಡನ್, ಅ.25 : ಭಾರತ ಪರಮಾಣು ಸ್ವಾವಲಂಬನೆ ಸಾಧಿಸಬೇಕೆಂದರೆ ಥೋರಿಯಂ ಇಂಧನ ಆಧಾರಿತ ರಿಯಾಕ್ಟರ್ ಬಳಸಬೇಕೆಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಲಹೆ ನೀಡಿದ್ದಾರೆ.

ರಿಯಾಕ್ಟರ್‌ಗಳೆಲ್ಲಾ ಯುರೇನಿಯಂ ಇಂಧನ ಆಧಾರಿತವಾದವುಗಳು. ನಮ್ಮಲ್ಲಿ ಯುರೇನಿಯಂ ನಿಕ್ಷೇಪದ ಕೊರತೆ ಇದೆ. ಆದರೆ ಥೋರಿಯಂ ಸಂಗ್ರಹ ಸಾಕಷ್ಟಿದೆ. ಇದನ್ನು ಬಳಸಿ ಪರಮಾಣು ಸ್ವಾವಲಂಬನೆ ಸಾಧಿಸಬಹುದು. ಥೋರಿಯಂ ವಿಘಟನೆಗೊಳ್ಳದ ಇಂಧನ. ನಾವು ದೇಶೀಯವಾಗಿ ನಿರ್ಮಿಸುತ್ತಿರುವ ತ್ವರಿತ ಬ್ರೀಡರ್ ರಿಯಾಕ್ಟರ್‌ಗಳ ಮೂಲಕ ಇದನ್ನು ವಿಘಟನೆಗೊಳ್ಳುವ ಇಂಧನವಾಗಿ ಪರಿವರ್ತಿಸಬಹುದು. ಪ್ರಸ್ತುತ ಯುರೇನಿಯಂ ನೆರೆವು ಪಡೆದು ನಂತರ ಥೋರಿಯಂ ಆಧಾರಿತ ರಿಯಾಕ್ಟರ್‌ಗಳನ್ನು ಸ್ಥಾಪಿಸುವುದು ಒಳಿತು ಎಂದು ಅವರು ಹೇಳಿದರು.

ಭಾರತ ಪರಮಾಣು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಯಾವುದೇ ದೇಶದೊಂದಿಗೆ ಎಂತಹ ಒಪ್ಪಂದ ಮಾಡಿಕೊಂಡರೂ ಒಳಿತು. ಭಾರತದ ಗ್ರಾಮೀಣ ಪ್ರದೇಶದಲ್ಲಿ 700 ದಶಲಕ್ಷದಷ್ಟು ಜನ ವಾಸಿಸುತ್ತಿದ್ದಾರೆ. ಗ್ರಾಮೀಣ ವಲಯದ ಅಭಿವೃದ್ಧಿಗಾಗಿ 30,000ದಿಂದ 40,000 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. 2020ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದು ಕಲಾಂ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X