ವಾಜಪೇಯಿ,ಆಡ್ವಾಣಿ ಸೋತ ಮತ್ತು ದುರ್ಬಲ ನಾಯಕರು!
ನವದೆಹಲಿ, ಅ.25 : ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಯ ಹಿನ್ನಲೆಯಲ್ಲಿ 'ಸಿಂಗ್ ಅತ್ಯಂತ ದುರ್ಬಲ ಪ್ರಧಾನಿ" ಎಂದು ಬಿಜೆಪಿ ಟೀಕಿಸಿತ್ತು. ಈ ಹೇಳಿಕೆಗೆ ಕಾಂಗ್ರೆಸ್ ತಿರುಗುಬಾಣ ಬಿಟ್ಟಿದೆ.
'ವಿಕಾಸ ಪುರುಷ" ಮತ್ತು 'ಲೋಹ ಪುರುಷ" ಎಂದು ಕರೆಯಲ್ಪಡುವ ವಾಜಪೇಯಿ ಮತ್ತು ಆಡ್ವಾಣಿ ನಿರಾಸೆಗೊಂಡ ಮತ್ತು ಭ್ರಮನಿರಸನಗೊಂಡ ನಾಯಕರು. ಆಡ್ವಾಣಿ 'ಲೋಹ ಪುರುಷ"ನಲ್ಲ Low ಪುರುಷ ಎಂದು ಎಐಸಿಸಿ ವಕ್ತಾರೆ ಜಯಂತಿ ನಟರಾಜನ್ ಲೇವಡಿ ಮಾಡಿದ್ದಾರೆ.
2001ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಪ್ರಧಾನಿ ವಾಜಪೇಯಿಯವರು ಎನ್‌ಡಿಎ ಮೈತ್ರಿಕೂಟವನ್ನು ನಿಭಾಯಿಸಲು ಸಾಧ್ಯವಾಗದೇ, ನಾನು ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ತಿಳಿಸಿ ಸಂಸತ್‌ನ್ನು ಸ್ಥಬ್ದಗೊಳಿಸಿದ್ದಲ್ಲದೆ ರಾಷ್ಟ್ರವನ್ನು ಗೊಂದಲಕ್ಕೀಡು ಮಾಡಿದ್ದರು. ವಾಜಪೇಯಿ ಹತಾಶಗೊಂಡ ಮತ್ತು ಸೋತ ಪ್ರಧಾನಿಯೇ ಹೊರತು ದೇಶವನ್ನು ಉನ್ನತಿಯತ್ತ ಕೊಂಡೊಯ್ಯುತ್ತಿರುವ ಮನಮೋಹನ್ ಸಿಂಗ್‌ರಲ್ಲ ಎಂದು ಅವರು ಕಾಂಗ್ರಸ್‌ನ್ನು ಸಮರ್ಥಿಸಿಕೊಂಡಿದ್ದಾರೆ.
(ಏಜನ್ಸೀಸ್)












Click it and Unblock the Notifications