ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಬಾಂಬ್: 165ಬಲಿ,ಭುಟ್ಟೋ ಬಚಾವ್

By Staff
|
Google Oneindia Kannada News

ಕರಾಚಿ, ಅ.19 : ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಅವರಿಗೆ, ತವರು ನೆಲದಲ್ಲಿ ರಕ್ತ ಸಿಕ್ತ ಸ್ವಾಗತ ದೊರೆತಿದೆ. ಗುರುವಾರ ರಾತ್ರಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಶುಕ್ರವಾರ(ಅ.19) 165ನ್ನು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನ ಬೆದರಿಕೆಯಿಂದಾಗಿ, ಸ್ವಯಂ ಪ್ರೇರಿತರಾಗಿ ದೇಶಬಿಟ್ಟು ಹೋಗಿದ್ದ ಭುಟ್ಟೋ ಎಂಟು ವರ್ಷಗಳ ನಂತರ ಪಾಕ್ ಗೆ ಮರಳಿದ್ದಾರೆ. ಬೆನಜಿರ್ ಭುಟ್ಟೋ ಅವರನ್ನು ಸ್ವಾಗತಿಸಿ, ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನಂತರ ಭುಟ್ಟೋ ಬೆಂಗಾವಲು ವಾಹನಗಳು ಹಾದು ಹೋಗುತ್ತಿದ್ದಾಗ, ಅವುಗಳ ಬಳಿಯೇ ಬಾಂಬ್ ಗಳು ಸ್ಫೋಟಿಸಿವೆ. ಈ ಸಂದರ್ಭದಲ್ಲಿ ಭುಟ್ಟೋ ಅಲ್ಲಿರಲಿಲ್ಲ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದೆ.

ಭುಟ್ಟೋಗೆ ಆಲ್ ಖೈದಾ ಉಗ್ರಗಾಮಿ ಸಂಘಟನೆಯ ಬೆದರಿಕೆ ಹಾಕಿದ್ದವು. ಇದಕ್ಕೆ ಸೊಪ್ಪು ಹಾಕದೇ ಭುಟ್ಟೋ ತವರಿಗೆ ಮರಳಿದ್ದರು. ಕರಾಚಿಯ ಆರು ಆಸ್ಪತ್ರೆಯಲ್ಲಿ 200ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಪಾಕ್ ಇತಿಹಾಸದಲ್ಲಿ ಅತ್ಯಂತ ಕ್ರೂರ ಬಾಂಬ್ ದಾಳಿ ಎನ್ನಲಾಗಿದೆ. ಘಟನೆಯನ್ನು ಅಮೆರಿಕಾ ಸೇರಿದಂತೆ ವಿವಿಧ ರಾಷ್ಟ್ರಗಳು ತೀಕ್ಷ್ಣವಾಗಿ ಖಂಡಿಸಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X