ಮಡಿಕೇರಿ : ಗುರುವಾರ ಪವಿತ್ರ ಕಾವೇರಿ ತೀರ್ಥೋದ್ಭವ
ಮಡಿಕೇರಿ, ಅ.17 : ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಗುರುವಾರ(ಅ.18)ತೀರ್ಥೋದ್ಭವವಾಗಲಿದೆ. ಆ ಕ್ಷಣಕ್ಕೆ ಸಾಕ್ಷಿಯಾಗಲು, ದೇಶದ ವಿವಿಧ ಭಾಗಗಳಿಂದ 25ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಪ್ರತಿವರ್ಷದಂತೆ ಈ ವರ್ಷವೂ ತೀರ್ಥೋದ್ಭವ ಪ್ರಾಮುಖ್ಯತೆ ಪಡೆದಿದೆ. ತೀರ್ಥ ದರ್ಶನ ಮಾಡಿಕೊಂಡು, ಪವಿತ್ರ ಸ್ನಾನ ಮಾಡಲು ಅನೇಕರು ಉತ್ಸುಕರಾಗಿದ್ದಾರೆ. ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆಯಿಂದ ಜನರು ತಲಕಾವೇರಿಗೆ ಆಗಮಿಸುತ್ತಿದ್ದಾರೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತು ಕಲ್ಪಿಸಲಾಗಿದೆ.
ಸಂಪ್ರದಾಯದ ಪ್ರಕಾರ ಅ.16ರಿಂದಲೇ ಪೂಜೆ ಪುನಸ್ಕಾರಗಳು ಆರಂಭಗೊಂಡಿವೆ. ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಗಳು ವಿಶೇಷ ಸಂಚಾರ ಸೇವೆಯನ್ನು ನೀಡುತ್ತಿವೆ. ಪೊಲೀಸರು ವಿಶೇಷ ಸಭೆ ನಡೆಸಿ, ಭದ್ರತೆ ಬಗ್ಗೆ ಸಮಾಲೋಚಿಸಿದ್ದಾರೆ. ಡಿಎಆರ್, ಕೆಎಸ್ಆರ್ ಪಿ, ಹೋಮ್ ಗಾರ್ಡ್ ಸೇರಿದಂತೆ ಪೊಲೀಸ್ ಪಡೆ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತ್ರಿಲೋಕ್ ಚಂದ್ರ ಹೇಳಿದ್ದಾರೆ.
(ಯುಎನ್ಐ)












Click it and Unblock the Notifications