ಸೋನಿಯಾ ದೆಸೆಯಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ?
ಬೆಂಗಳೂರು, ಅ.08 : ಸೋಮವಾರ(ಅ.08)ದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ಸಾಧ್ಯತೆಗಳು ದಟ್ಟವಾಗುತ್ತಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮರು ಮೈತ್ರಿ ಪ್ರಸ್ತಾಪ ಜೀವ ಕಳೆದುಕೊಂಡಿದ್ದು, ಸದ್ಯದ ಕುಮಾರಸ್ವಾಮಿ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ರಾಜ್ಯಪಾಲರನ್ನು ಸೋಮವಾರ(ಅ.08) ಒತ್ತಾಯಿಸಿದೆ. ಸಂವಿಧಾನಾತ್ಮಕವಾಗಿ ನಿರ್ಣಯ ಕೈಗೊಳ್ಳುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಭರವಸೆ ನೀಡಿದ್ದಾರೆ.
ಸದ್ಯಕ್ಕೆ ಚುನಾವಣೆ ಎದುರಿಸಿದರೇ, ಪರಿಸ್ಥಿತಿ ಪ್ರತಿಕೂಲವಾಗಬಹುದು ಎಂಬ ಆತಂಕ ಕಾಂಗ್ರೆಸ್ ಗೆ ಇದೆ. ಬಿಜೆಪಿ ಅನುಕಂಪದ ಅಲೆಯನ್ನು ಕಾಂಗ್ರೆಸ್ ಗುರ್ತಿಸಿದೆ. ಹೀಗಾಗಿ ತತ್ ಕ್ಷಣ ಚುನಾವಣೆ ತಪ್ಪಿಸಲು, ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಸೋನಿಯಾ ಗಾಂಧಿ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳಿವೆ. ಹೇಗಿದ್ದರೂ ಕೇಂದ್ರದಲ್ಲಿ ಯುಪಿಎ ಸರ್ಕಾರವೇ ಇದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications