ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ : ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆ?

By Super
|
Google Oneindia Kannada News

ಬೆಂಗಳೂರು, ಅ.08 : ಕಾಂಗ್ರೆಸ್ ಮತ್ತು ಜೆಡಿಎಸ್ ಮರು ಹೊಂದಾಣಿಕೆ ಸಾಧ್ಯವಾಗದಿದ್ದರೇ, ಮಧ್ಯಂತರ ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ಖಚಿತ. ಆದರೆ 2008ರ ಫೆಬ್ರವರಿಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ.

ಅಗತ್ಯ ಸಂದರ್ಭ ಬಂದರೆ 2008ರ ಫೆಬ್ರವರಿಯಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಬೆಂಗಳೂರು ನಗರ ಹೊರತು ಪಡಿಸಿ, ಇಡೀ ರಾಜ್ಯದಲ್ಲಿ ಮತದಾರರ ಪರಿಷ್ಕರಣೆ ಕಾರ್ಯ ಮುಗಿದಿದೆ. ಅಕ್ಟೋಬರ್ ವೇಳೆಗೆ ಬೆಂಗಳೂರು ನಗರದಲ್ಲೂ ಪರಿಷ್ಕರಣೆ ಮುಗಿಯಲಿದೆ. ಪುನರ್ ಪರಿಷ್ಕರಣೆ 2008ರ ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಚುನಾವಣೆಗೂ ಮೊದಲು ಮತದಾರರ ಪರಿಷ್ಕರಣೆ ಪೂರ್ಣಗೊಳಿಸಲು ಆಯೋಗ ನಿರ್ಧರಿಸಿದೆ. ಹೀಗಾಗಿ ಫೆಬ್ರವರಿಯಲ್ಲಿ ಚುನಾವಣೆ ನಡೆಸಬಹುದು.

2004ರ ಚುನಾವಣೆಯಲ್ಲಿ 3ಕೋಟಿ 85ಲಕ್ಷ ಮತದಾರ ಕರ್ನಾಟಕದಲ್ಲಿದ್ದರು. 2006ರಲ್ಲಿ 2.12ಕೋಟಿ ಪುರುಷರು ಮತ್ತು 2.04ಕೋಟಿ ಮಹಿಳಾ ಮತದಾರರು ಸೇರಿದಂತೆ ಒಟ್ಟು 4ಕೋಟಿ 16ಲಕ್ಷ ಮತದಾರರಿದ್ದಾರೆ.

English summary
Elections not earlier than Feb
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X