ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಕೃಷ್ಣನಿಗೆ ಹೋಲಿಸಬಹುದು!: ಚಂಪಾ ಗೇಲಿ

By Staff
|
Google Oneindia Kannada News

ಬೆಂಗಳೂರು, ಅ.8 : ಉಡುಪಿಯಲ್ಲಿ ನಡೆಯುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮತ್ತೊಮ್ಮೆ ಮುಂದೂಡುವುದಿಲ್ಲ ಎಂದು ಚಂಪಾ ತಿಳಿಸಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ನಡೆದ ಡಾ. ಮತ್ತೂರು ಕೃಷ್ಣಮೂರ್ತಿ ಅವರ 'ಧರ್ಮರಾಜ ಯುಧಿಷ್ಠಿರ" ಎಂಬ ಕೃತಿ ಬಿಡುಗಡೆ ಸಮಾರಂಭದ ನಂತರ ಅವರು ಸುದ್ದಿಗಾರರ ಬಳಿ ಮಾತನಾಡುತ್ತಿದ್ದರು. ಸಮ್ಮೇಳನದಿಂದ ಆರಂಭವಾದ ಚಂಪಾ ಮಾತು, ಸದ್ಯದ ರಾಜಕಾರಣದ ತನಕ ಮುಂದುವರೆಯಿತು.

ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಸಮ್ಮೇಳನದ ಸಮಯ ಬದಲಾಗಬಹುದು. ಇಲ್ಲದಿದ್ದ ಪಕ್ಷದಲ್ಲಿ ನಿಗದಿತ ದಿನದಂದೇ ಸಮ್ಮೇಳನ ನಡೆಯುತ್ತದೆ. ಸಾಹಿತ್ಯ ಸಮ್ಮೇಳನಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಮುಖ್ಯಮಂತ್ರಿಗಳನ್ನು ಸಮಾರೋಪ ಸಮಾರಂಭಕ್ಕೆ ಆಹ್ವಾನಿಸುತ್ತೇವೆ ಉಳಿದಂತೆ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸುವುದಿಲ್ಲ ಎಂದು ಚಂಪಾ ಹೇಳಿದರು.

ರಾಮಾಯಣ, ಮಹಾಭಾರತಗಳು ಇಂದಿಗೂ ಪ್ರಸ್ತುತ. ದ್ವಿತೀಯ ಮಹಾಯುದ್ಧದ ಸನ್ನಿವೇಶಗಳು ಮಹಾಭಾರತವನ್ನು ಹೋಲುತ್ತವೆ. ಪ್ರಸ್ತುತ ರಾಜಕೀಯ ಬಿಕ್ಕಟ್ಟಿನಲ್ಲಿಯೂ ಮಹಾಕಾವ್ಯಗಳಲ್ಲಿನ ಸನ್ನಿವೇಶಗಳು ಮರುಕಳಿಸುತ್ತವೆ. ಎರಡೂ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಮಾಯಣ, ಮಹಾಭಾರತದ ವ್ಯಕ್ತಿಗಳನ್ನು ಉದ್ದರಿಸುತ್ತಿದ್ದಾರೆ. ಮಹಾಭಾರತದ ಶ್ರೀಕೃಷ್ಣನ ಪಾತ್ರವನ್ನು ಮಾಜಿ ಪ್ರಧಾನಿ ದೇವೇಗೌಡರಿಗೆ ಹೋಲಿಸಬಹುದು. ದ್ರೋಣಾಚಾರ್ಯರು ಶಸ್ತ್ರ ತ್ಯಜಿಸುವಂತೆ ಕೃಷ್ಣ ರಣತಂತ್ರ ಹೂಡಿದ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ದೇವೇಗೌಡರು ಅನುಸರಿಸುತ್ತಿರುವುದು ರಣತಂತ್ರವನ್ನೆ. ಈಗ ವ್ಯಾಪಕವಾಗಿ ಕೇಳಿಸುತ್ತಿರುವ 'ವಚನ ಭ್ರಷ್ಟ" ಪದ ಹುಟ್ಟಿರುವುದೇ ಮಹಾಭಾರತದಲ್ಲಿ ಎಂದು ಚಂಪಾ ನಗೆ ಚಟಾಕಿ ಹಾರಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X