ಅವಧಿಗೆ ಮುನ್ನವೇ ರಾಜಭವನಕ್ಕೆ ಕಾಂಗ್ರೆಸ್ ಶಾಸಕರ ದೌಡು
ಬೆಂಗಳೂರು, ಆ.08 : ರಾಜ್ಯಪಾಲರನ್ನು ಎಐಸಿಸಿ ಕಾರ್ಯದರ್ಶಿ ಪೃಥ್ವಿರಾಜ್ ಚೌವ್ಹಾಣ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಸೋಮವಾರ(ಅ.8) ಭೇಟಿ ಮಾಡಿ, ಸದ್ಯದ ಬೆಳವಣಿಗೆಗಳನ್ನು ಚರ್ಚಿಸಿದರು.
ಸೋಮವಾರ(ಅ.8) ಬೆಳಗ್ಗೆ 11ಕ್ಕೆ ರಾಜ್ಯಪಾಲರೊಂದಿಗೆ ಭೇಟಿ ನಿಗದಿಯಾಗಿತ್ತು. ಆದರೆ ಅವಧಿಗೆ ಮುಂಚೆಯೇ ಅಂದರೆ 9ಕ್ಕೆ ರಾಜಭವನದತ್ತ ಕಾಂಗ್ರೆಸ್ ಶಾಸಕರು ದೌಡಾಯಿಸಿದ್ದರು. ಈ ಸಮಯ ಬದಲಾವಣೆಗೆ ಕಾರಣ ಮತ್ತು ರಾಜ್ಯಪಾಲರೊಂದಿಗಿನ ಮಾತುಕತೆ ವಿವರಗಳ್ನು ನಿರೀಕ್ಷಿಸಲಾಗಿದೆ.
ಬಿಜೆಪಿ ಬೆಂಬಲ ವಾಪಸ್ ಪಡೆದ ತಕ್ಷಣ ಕಾಂಗ್ರೆಸ್ ಪಾಳಯದಲ್ಲಿರುವ ನಾಯಕರಿಗೆ ರೆಕ್ಕೆಪುಕ್ಕ ಬಂದಿವೆ. ಈವರೆಗೆ ಸುಮ್ಮನಿದ್ದ ಕಾಂಗ್ರೆಸ್ ಆಟವನ್ನು ಈಗ ಆರಂಭಿಸಿದೆ. ರಾಜ್ಯದ ಕಾಂಗ್ರೆಸ್ ಮುಖಂಡರು ಮತ್ತು ರಾಜ್ಯಪಾಲರ ಒಲವು ನಿಲುವುಗಳನ್ನು ಚೌವ್ಹಾಣ್, ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿಗೆ ವಿವರಿಸಲಿದ್ದಾರೆ. ಆಮೇಲೆ ಸೋನಿಯಾ ಏನನ್ನುತ್ತಾರೋ, ಅದಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ತಲೆಯಾಡಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications