ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಅಕ್ಕರೆಇರೋರಿಗೆ ಮಾತ್ರ!

By Staff
|
Google Oneindia Kannada News

ಬೆಂಗಳೂರು, ಅ.4 : ಇದೇ ತಿಂಗಳ ಅ.5ರಿಂದ 7ರವರೆಗೆ ಮೂರು ದಿನಗಳ ಕಾಲ 'ಅರಣ್ಯಂ 2007 : ಪರಿಸರ ಮತ್ತು ವನ್ಯಜೀವಿಗಳ ಕುರಿತ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ" ನಗರದಲ್ಲಿ ನಡೆಯಲಿದೆ.

ಆಕ್ಟ್ ನೌ ಟ್ರಸ್ಟ್ ಆಶ್ರಯದಲ್ಲಿ ವಸಂತನಗರದ ಗುರುನಾನಕ್ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈಲ್ಡ್ ಸ್ಕ್ರೀನ್-ಯುಕೆ, ಕರ್ನಾಟಕ ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ, ಬೆಂಗಳೂರು ಮೆಟ್ರೊ ರೈಲು ಕಾರ್ಪೋರೇಷನ್, ವೊಡಫೋನ್ ಎಸ್ಸಾರ್ ಮತ್ತು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ.

'ಬೆಂಗಳೂರು ಮತ್ತು ಹವಾಮಾನ ಬದಲಾವಣೆ : ಬೆಂಗಳೂರು ಕಾರ್ಬನ್ ರಹಿತ ಆಗಲು ಸಾಧ್ಯವೇ" ಈ ಕುರಿತಂತೆ ಅ.6ರಂದು ಸಂಜೆ 6ಕ್ಕೆ ಚರ್ಚಾಗೋಷ್ಠಿ ನಡೆಯಲಿದೆ. ಐಐಎಸ್ಸಿಯ ಡಾ.ಚಾಣಕ್ಯ, ಇ-ಪರಿಸರ ಸಂಸ್ಥೆಯ ಸ್ಥಾಪಕ ಪಿ.ಪಾರ್ಥಸಾರಥಿ ಸೇರಿದಂತೆ ಮಾಧ್ಯಮ, ಐಟಿ ಹಾಗೂ ಸಮಾಜದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕೃಪಾಕರ ಸೇನಾನಿಯವರ 'ವೈಲ್ಡ್ ಡಾಗ್ ಡೈರೀಸ್" ಎಂಬ ಪ್ರಶಸ್ತಿ ವಿಜೇತ ಚಿತ್ರವು, ಅ.5ರಂದು ಸಂಜೆ 5.30ಕ್ಕೆ ಪ್ರದರ್ಶಿತವಾಗಲಿದೆ. ಆ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅ.6ರಂದು ಹವಾಮಾನ ಸ್ಥಿತಿ ಕಾರ್ಯಕ್ರಮಗಳು, ಅ.7ಕ್ಕೆ ವೈಲ್ಡ್ ಸ್ಪೆಕ್ಟ್ರಂ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಪರಿಸರದ ಬಗ್ಗೆ ಕಾಳಜಿ, ಪ್ರಾಣಿ-ಪಕ್ಷಿಗಳ ಕುರಿತು ಆಸಕ್ತಿ ಇದ್ದರೆ ಒಮ್ಮೆ ಹೋಗಿ ಬನ್ನಿ.

ಹೆಚ್ಚಿನ ವಿವರಕ್ಕಾಗಿ ಕೊಂಡಿ : http://www.aranyam.org/

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X