ಕರ್ನಾಟಕ ಅಥವಾ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗೆ ಕುರ್ಚಿ ದಕ್ಕದು
ಬೆಂಗಳೂರು, ಅ.04 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಆಧಿಕಾರ ಹಿಡಿಯುವ ಸಾಧ್ಯತೆಗಳನ್ನು ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ವಿ.ಶಿವರಾಜ ಪಾಟೀಲ್ ಗುರುವಾರ(ಅ.04) ತಳ್ಳಿಹಾಕಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಮುಖ್ಯವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಅಧಿಕಾರ ದೊರಕುವ ಸಂದರ್ಭ ಸೃಷ್ಟಿಯಾಗದು. ಬಿಜೆಪಿ ಕೇವಲ ಅಧಿಕಾರದ ಕನಸು ಕಾಣಬೇಕಷ್ಟೇ ಎಂದರು. ರಾಜ್ಯದಲ್ಲಿನ ದೋಸ್ತಿ ಸರ್ಕಾರಕ್ಕೆ ತೊಡಕಾದರೆ, ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಸರ್ಕಾರ ರಚಿಸುವುದೇ ಎಂಬ ಪ್ರಶ್ನೆಗೆ ಶಿವರಾಜ ಪಾಟೀಲ್ ಸ್ಪಷ್ಟವಾಗಿ ಉತ್ತರ ನೀಡಲಿಲ್ಲ.
ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ರಾಜ್ಯ ಕಾಂಗ್ರೆಸ್, ಮರು ಮೈತ್ರಿಯ ಬಗ್ಗೆ ನಿರುತ್ಸಾಹವನ್ನೇನು ತೋರಿಸಿಲ್ಲ. ಹೈಕಮಾಂಡ್ ಆದೇಶ ಏನೇ ಇರಲಿ, ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಈಗಾಗಲೇ ಕಾಂಗ್ರೆಸ್ ನಾಯಕರಾದ ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications