ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಏರಿತು ಕ್ರಿಕೆಟ್ ಜ್ವರ; ಬಂತು ಪಾರ್ಕಿಂಗ್‌ಗೆ ಬರ

By Staff
|
Google Oneindia Kannada News

ಬೆಂಗಳೂರು, ಸೆ.27 : ಈ ಶನಿವಾರ (ಸೆ.29) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ. ಶನಿವಾರ ಈ ಕೆಳಕಂಡ ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಬೆಳಗ್ಗೆ 10ರಿಂದ ರಾತ್ರಿ 11ರವರೆಗೂ ವಾಹನಗಳನ್ನು ಕ್ರೀಡಾಂಗಣದ ಸುತ್ತಮುತ್ತ ನಿಲ್ಲಿಸುವಂತಿಲ್ಲ. ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಈ ನಿಯಮ ಅನ್ವಯವಾಗದು.

ಎಲ್ಲೆಲ್ಲಿ ನಿರ್ಬಂಧ?

  • ಸಿಟಿಓ ವೃತ್ತದಿಂದ ಕ್ವೀನ್ಸ್ ಪ್ರತಿಮೆ ವೃತ್ತದವರೆಗೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆ,ಕಬ್ಬನ್ ರಸ್ತೆ,ಸೆಂಟ್ರಲ್ ಸ್ಟ್ರೀಟ್ ಈ ರಸ್ತೆಗಳಲ್ಲಿ ಎರಡೂ ಬದಿ ವಾಹನ ನಿಲ್ಲಿಸುವಂತಿಲ್ಲ.
  • ಕಬ್ಬನ್ ರಸ್ತೆಯಿಂದ ಬಿಆರ್ ವಿ ಜಂಕ್ಷನ್, ಡಿಕೆನ್ಸನ್ ರಸ್ತೆ, ಕಾಮರಾಜ್ ರಸ್ತೆಯ ಜಂಕ್ಷನ್‌ಗಳಲ್ಲಿ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಮತ್ತ್ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.
  • ಲಿಂಕ್ ರಸ್ತೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್‌ಕೋರ್ಸ್ ರಸ್ತೆ.

ವಾಹನ ನಿಲುಗಡೆ ಎಲ್ಲಿ? (ಪಂದ್ಯ ವೀಕ್ಷಿಸಲು ಬರುವವರಿಗಾಗಿ ಮಾತ್ರ)
  • ನಸುಗೆಂಪು ಬಣ್ಣದ ಪಾಸ್ ಹೊಂದಿರುವವರು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಬಿಆರ್‌ವಿ ಪೋಲೀಸ್ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಬಹುದು.
  • ಸೆಂಟ್ ಮಾರ್ಕ್ಸ್ ರಸ್ತೆ, ಕ್ಯಾಥೆಡ್ರಲ್ ಚರ್ಚ್ ಗ್ರೌಂಡ್ ಲೇವೆಲ್ಲಾ ರಸ್ತೆಗಳಲ್ಲಿ ಹಳದಿ ಬಣ್ಣದ ಪಾಸ್‌ಗಳನ್ನು ಹೊಂದಿದವರು ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಬಹುದು.
  • ಹಸಿರು ಪಾಸ್ ಹೊಂದಿದವರಿಗೆ ಕ್ವೀನ್ಸ್ ರಸ್ತೆ. ಬಾಲಭವನದಿಂದ ಹೈಕೋರ್ಟ್ ಜಂಕ್ಷನ್, ಪ್ರೆಸ್ ಕ್ಲಬ್, ಪರಸ್ಥಳಗಳಿಂದ ಬರುವವರು ಬಿಆರ್‌ವಿ ಜಂಕ್ಷನ್ ಮತ್ತು ಕಾಮರಾಜ್ ರಸ್ತೆಯಲ್ಲಿ ವಾಹನ ನಿಲ್ಲಿಸಬಹುದು.
  • ಕಸ್ತೂರಬಾ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಬಹುದೆಂದು ಕಮೀಷನರ್ ಕಚೇರಿ ಮೂಲಗಳು ತಿಳಿಸಿವೆ.

ಆನ್ ಲೈನಲ್ಲಿ ಟಿಕೆಟ್‌ನ್ನು ಮುಂಗಡ ಕಾಯ್ದಿರಿಸಲು ಬಳಸಿಕೊಳ್ಳಿ : http://www.ticketpro.in/

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X