ಪುರುಸೊತ್ತಿದ್ರೆ ಬೆಂಗಳೂರಿಗರು ಜ್ಯೋತಿಷ್ಯ ಕಲಿಯಬಹುದು!
ಬೆಂಗಳೂರು, ಸೆ.27 : ಜ್ಯೋತಿಷ್ಯ ಮಣ್ಣು ಮಸಿ ಎಂದು ಕೆಲವರು ಗೊಣಗಿದರೆ, ಜ್ಯೋತಿಷ್ಯವೇ ಬೆಳಕು ಎಂದು ಅನೇಕರು ಶರಣು ಶರಣೆನ್ನುತ್ತಾರೆ. ರಾಜಕಾರಣಿಗಳು, ಸಿನಿಮಾ ನಟರು ಸೇರಿದಂತೆ ಅನೇಕ ಗಣ್ಯರು ಕೈ ಚಾಚಿಕೊಂಡು ಭವಿಷ್ಯ ಹುಡುಕುತ್ತಿದ್ದಾರೆ. ಆ ಚರ್ಚೆ ಇಲ್ಲಿ ಬೇಡ. ನಿಮಗೆ ಜ್ಯೋತಿಷ್ಯ ಕಲಿಯುವ ಬಯಕೆ ಇದ್ದರೇ, ಇಲ್ಲಿದೆ ಅವಕಾಶ.
ಸೆ.30ರಿಂದ ಪ್ರತಿ ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 5ರ ತನಕ ಉಚಿತ ಜ್ಯೋತಿಷ್ಯ ತರಗತಿಗಳು ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಭಾರತ ಸೇವಾದಳ ಶಾಲೆಯಲ್ಲಿ ನಡೆಯಲಿವೆ. ಆಸಕ್ತರಿಗೆ ಪ್ರೀತಿಯ ಸ್ವಾಗತ.
ಅಖಿಲ ಭಾರತ ಜ್ಯೋತಿಷ್ಯ ಸಂಸ್ಥಾ ಸಂಘವು ತರಗತಿ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 98456 34181.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications