ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 29ರ ಕನ್ನಡ ಹಬ್ಬಕ್ಕೆ 'ಈಕವಿ'ಕರೆಯೋಲೆ

By Staff
|
Google Oneindia Kannada News

ಬೆಂಗಳೂರು, ಸೆ.27 : ಕನ್ನಡ ಅಭಿಮಾನಿಗಳ ಅಂತಾರಾಷ್ಟ್ರೀಯ ವೇದಿಕೆ 'ಈಕವಿ', ಸಂಭ್ರಮದ ಸುವರ್ಣ ಕರ್ನಾಟಕ ಹಬ್ಬವನ್ನು ಸೆ.29ರಂದು ಆಚರಿಸಲು ಸಿದ್ಧತೆ ನಡೆಸಿದೆ. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು.. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಧ್ಯೇಯ ನುಡಿಯೊಂದಿಗೆ 'ಸುವರ್ಣ ಸಂಭ್ರಮ"ಕ್ಕೆ ನೀವೂ ಬನ್ನಿ, ನಿಮ್ಮ ನೆರೆಹೊರೆಯವರನ್ನೂ ಕರೆ ತನ್ನಿ ಎಂದು ಈಕವಿ ಬಳಗ ಆಹ್ವಾನಿಸುತ್ತಿದೆ.

ಸೆ.29ರ ಸಂಜೆ 4ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣ(ಸೆಂಟ್ರಲ್ ಕಾಲೇಜು ಆವರಣ)ದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಉದ್ಘಾಟಿಸುವರು. ಗಂಗೂಬಾಯಿ ಹಾನಗಲ್, ಸರೋಜಿನಿ ಮಹಿಷಿ, ಶಿವಮೊಗ್ಗ ಸುಬ್ಬಣ್ಣ, ಮುಖ್ಯಮಂತ್ರಿ ಚಂದ್ರು, ವಾಟಾಳ್ ನಾಗರಾಜ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.

ಬೆಂಗಳೂರು ವಿವಿ ಉಪಕುಲಪತಿ ಎ.ಎಸ್. ರಂಗನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್‌, ಶಾಸಕ ನೆ.ಲ. ನರೇಂದ್ರ ಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸುವರು.

ಈಕವಿ ಬಗ್ಗೆ ಒಂದಿಷ್ಟು :

ಚಂದ್ರಶೇಖರ ಕಂಬಾರ (ಗೌರವ ಅಧ್ಯಕ್ಷರು), ವಿ.ಎಂ.ಕುಮಾರಸ್ವಾಮಿ (ಅಧ್ಯಕ್ಷರು), ಅಭಿನಾಶ್ ಗಣೇಶ್ (ಕಾರ್ಯದರ್ಶಿ), ಈರಣ್ಣ ಗೌಡ (ಖಜಾಂಚಿ) ಈಕವಿ ಕುಟುಂಬದ ಪ್ರಮುಖರು.

ಈಕವಿ ವಿಳಾಸ :
ನಂ.34/1, ಎಂ.ಟಿ. ಬಡಾವಣೆ, 1ನೇ ಅಡ್ಡರಸ್ತೆ,
ಮಲ್ಲೇಶ್ವರಂ, ಬೆಂಗಳೂರು-03
ಮೊಬೈಲ್ ಸಂಖ್ಯೆ- 99860 33321

ಅಂತರ್ಜಾಲ ತಾಣ : http://www.ekavi.org/
ಇ-ಮೇಲ್ ವಿಳಾಸ : [email protected]

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X