ಭಾರತೀಯ ಮಹಿಳೆಯ ಮೂಗಿಗೆ ನತ್ತು ಭಾರವಾದ ಸುದ್ದಿಯಿದು!-
ಲಂಡನ್, ಸೆಪ್ಟೆಂಬರ್ 22 : ಬ್ರಿಟೀಶ್ ಏರ್ ವೇಸ್‌ನ ವಿಐಪಿ ಲಾಂಜ್‌ನಲ್ಲಿ ಕೆಲಸ ಮಾಡುವ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕಾರಣ ಒಂದು ಸಣ್ಣ ಮೂಗುನತ್ತು ಧರಿಸಿದ್ದಕ್ಕಾಗಿ. ಮೂಗಿಗೆ ಮೂಗುನತ್ತು ಭಾರವಾದ ಸುದ್ದಿಯಿದು.
ಅಮೃತ್ ಲಾಲ್‌ಜಿ (43) ಎಂಬ ಮಹಿಳೆಯೇ ಅಮಾನತ್ತಾದ ಭಾರತೀಯ ಮಹಿಳೆ. ಬ್ರಿಟಿಶ್ ಏರ್‌ವೇಸ್‌ನ ಅಧಿಕಾರಿಗಳು ಮೂಗುನತ್ತನ್ನು ಧರಿಸುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಭಾರತೀಯ ಸಂಪ್ರದಾಯವನ್ನು ವಿರೋಧಿಸುವುದಿಲ್ಲ ಎಂದು ಈಕೆಯೂ ಗಟ್ಟಿಯಾಗಿ ಹೇಳಿದ್ದಾಳೆ. ಅಷ್ಟೆ ಕೆಲಸದಿಂದ ತೆಗೆದು ಹಾಕಿದರು.
ಮೂಗುನತ್ತು ಧರಿಸಿರುವುದರಿಂದ ಗ್ರಾಹಕರಿಂದ ಪ್ರಯಾಣಿಕರಿಂದಲಾಗಲಿ ಯಾವುದೇ ದೂರು ಅಥವಾ ವಿರೋಧವಿಲ್ಲದಿದ್ದರೂ ಈ ಕ್ರಮ ಕೈಗೊಂಡಿದ್ದಾರೆಂದು ಮೂರು ಮಕ್ಕಳ ತಾಯಿಯಾದ ಲಾಲ್‌ಜಿ ಹೇಳಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಮೂಗುನತ್ತು ಧರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಲಾಲ್ ಜಿ ಮೊದಲ ದರ್ಜೆ ಪ್ರಯಾಣಿಕರಿಗೆ ಆತಿಥ್ಯ ಕೊಡಬೇಕಾಗಿರುವುದರಿಂದ ಈ ರೀತಿಯ ಲೋಹಗಳನ್ನು ಬಳಸುವಂತಿಲ್ಲ. ಇಲ್ಲಿ ಕೆಲಸ ಮಾಡುವವರು ಯಾವುದೇ ರೀತಿಯ ಆಭರಣಗಳನ್ನು ಬಳಸುವಂತಿಲ್ಲ. ಕ್ರೈಸ್ತರು ಮದುವೆ ಉಂಗುರ ಬಳಸಬಹುದು. ಓಲೆಗಳನ್ನು ಧರಿಸಬಹುದು. ಇವು ಕೆಲವು ರೀತಿಯ ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತವೆ. ಆದ್ದರಿಂದ ನಿಷೇಧಿಸಲಾಗಿದೆ ಎಂದು ಬ್ರಿಟೀಶ್ ಏರ್‌ವೇಸ್ ತಿಳಿಸಿದೆ.
ಇದೀಗ ಬಂದ ಸುದ್ದಿ : ಮಾಧ್ಯಮದವರ ಮಧ್ಯಪ್ರವೇಶದಿಂದ ಲಾಲ್‌ಜಿಯನ್ನು ಮತ್ತೆ ಕೆಲಸಕ್ಕೆ ಸೇರಿಕೊಳ್ಳಲಾಗಿದೆ.
(ಯುಎನ್‌ಐ)












Click it and Unblock the Notifications