ಮುಂದಿನ 48ಗಂಟೆಗಳಲ್ಲಿ ರಾಜ್ಯದಿ ಕುಂಭ ದ್ರೋಣ ಮಳೆ?
ಬೆಂಗಳೂರು, ಸೆಪ್ಟೆಂಬರ್ 03 : ಕಳೆದ 24ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಕಣಿವೆ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಿದ್ದಿರುವುದು ಸೋಮವಾರ ದಾಖಲಾಗಿದೆ. ಮಂಗಳವಾರ ಹೆಚ್ಚಿನ ಮಳೆ ಬೀಳುವ ಸಾಧ್ಯತೆಗಳಿವೆ.
ನಷ್ಟದ ಪ್ರಮಾಣ ಮತ್ತು ಸಾವು ನೋವಿನ ಸಂಗತಿಗಳು ವರದಿಯಾಗಿಲ್ಲ. ಹವಾಮಾನ ಇಲಾಖೆ ನಿರ್ದೇಶಕ ಜಿ.ಎಸ್.ವಿಜಯರಾಘವನ್, ಮುಂದಿನ 48ಗಂಟೆಗಳಲ್ಲಿ ಕರಾವಳಿ, ಘಟ್ಟ ಪ್ರದೇಶ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಅತಿ ಹೆಚ್ಚು ಎಂದರೆ 13ಸೆಂ.ಮೀ ಮಳೆ, ಕಳೆದ 24ಗಂಟೆಗಳಲ್ಲಿ ದಾಖಲಾಗಿದೆ. ಶಿರಾಲಿ, ಭಾಮಂಡಲದಲ್ಲಿ ತಲಾ 12ಸೆಂ.ಮೀ, ಅಂಕೋಲಾ, ಆಗುಂಬೆಯಲ್ಲಿ ತಲಾ 11ಸೆಂ.ಮೀ. ಕೋಟಾ, ಭಟ್ಕಳ, ಹೊನ್ನಾವರದಲ್ಲಿ ತಲಾ 10ಸೆಂ.ಮೀ, ಮತ್ತು ಸುಳ್ಯಾದಲ್ಲಿ 9ಸೆಂ.ಮೀ ಮಳೆ ಬಿದ್ದಿದೆ.
(ಯುಎನ್ಐ)












Click it and Unblock the Notifications