ದೇವೇಗೌಡರ ಮನೆಯವರು ಪತ್ರಿಕೆ ಮಾಡ್ತಾರಂತೆ ನಿಜ್ವಾ?
ಪತ್ರಕರ್ತರಿಗೂ ಮಾಜಿ ಪ್ರಧಾನಿ ದೇವೇಗೌಡರಿಗೂ ಎಣ್ಣೆ ಸೀಗೆಕಾಯಿ ಸಂಬಂಧ! ಅವರ ಮೂಗಿನ ನೇರಕ್ಕೆ ಬರೆಯದಿದ್ದರೇ ಸಿಟ್ಟು ಬಂದೇ ಬರುತ್ತೆ ಅಲ್ವಾ?
ನಾನು ಹೇಳೋದೊಂದು ಪತ್ರಕರ್ತರು ಬರೆಯೋದೊಂದು. ನನ್ನ ಭಾಷಣವನ್ನು 4ನೇ ಪುಟದಲ್ಲಿ ಪ್ರಕಟಿಸುತ್ತಾರೆ. ಪತ್ರಕರ್ತರು ಪಕ್ಷಪಾತ ಮಾಡುತ್ತಾರೆ ಎಂದು ಆಗಾಗ ಗೊಣಗುತ್ತಿದ್ದ ಗೌಡರು, ತಾವೇ ಒಂದು ಪತ್ರಿಕೆ ಆರಂಭಿಸಲು ಚಿಂತನೆ ನಡೆಸಿದ್ದಾರೆ.
ಸುದ್ದಿಗಾರರ ಬಳಿ ಈ ವಿಚಾರ ಪ್ರಸ್ತಾಪಿಸಿರುವ ಅವರು, ಬಡ ಜನರು,ರೈತರ ಕಲ್ಯಾಣಕ್ಕಾಗಿ ಮತ್ತು ಪಕ್ಷದ ವಿಚಾರಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಪತ್ರಿಕೆ ಆರಂಭಿಸುವ ಯೋಚನೆ ಮನದಲ್ಲಿದೆ. ಈ ಬಗ್ಗೆ ಅತಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳ ಪತ್ನಿ ಅನಿತಾ ಕುಮಾರಸ್ವಾಮಿ ಒಡೆತನದಲ್ಲಿ ಕಸ್ತೂರಿ ಚಾನೆಲ್ ರೂಪುಗೊಂಡಿದ್ದು, ಸದ್ಯದಲ್ಲೇ ಪ್ರಸಾರ ಆರಂಭಿಸಲು ಸಿದ್ಧತೆ ನಡೆಸಿದೆ. ಟೀವಿ ಆಯಿತು, ಈಗ ಪೇಪರ್ ಮಾಡೋ ಬಯಕೆ ಗೌಡರ ಕುಟುಂಬದಲ್ಲಿದೆ.
ದೇವೇಗೌಡರ ಪೇಪರ್ ಗೆ ಯಾವ ಹೆಸರು ಸೂಕ್ತ? ಓದುಗರೇ, ಯೋಚನೆ ಮಾಡಿ..












Click it and Unblock the Notifications