ಒಂದೂವರೆ ತಿಂಗಳ ಕೂಸು ಪಾನ್ ಕಾರ್ಡ್ ಪಡೆದು ದಾಖಲೆ!
ಮುಂಬಯಿ, ಆಗಸ್ಟ್ 13 : ಭೂಮಿಗೆ ಬಂದು ಕೇವಲ 44ದಿನ ಮಾತ್ರ ಆಗಿದೆ. ಈಗಲೇ ಈ ಪುಟ್ಟ ಕಂದಮ್ಮ ಪಾನ್ ಕಾರ್ಡ್ ಹೊಂದುವ ಮುಖಾಂತರ, ಹೊಸ ದಾಖಲೆಗೆ ಕಾರಣಳಾಗಿದ್ದಾಳೆ.
ಕೆಲವು ವಾರಗಳ ಹಿಂದಷ್ಟೇ 56ದಿನಗಳ ವಯಸ್ಸಿನ ಬಾಲಕನೊಬ್ಬ ಪಾನ್ ಕಾರ್ಡ್ ಹೊಂದಿದ್ದ ಬಗ್ಗೆ ವರದಿಯಾಗಿತ್ತು. ಆ ದಾಖಲೆ ಈಗ ಹಳೆಯದಾಗಿದೆ. ಚೆನ್ನೈನ ಆರ್.ಬಿ.ಅಕ್ಷಿತಾ ಪಾನ್ ಕಾರ್ಡ್ ಹೊಂದಿ, ಹಳೆಯ ದಾಖಲೆಯನ್ನು ಮುರಿದಿದ್ದಾಳೆ.
ಅಕ್ಷಿತಾಳ ತಂದೆ ಷಣ್ಣುಖಂ ಬಾಲಮುರುಗನ್ ಎಲೆಕ್ಟ್ರಿಕಲ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಮಗಳ ಹೆಸರಲ್ಲಿ ಸ್ವಲ್ಪ ಹಣವನ್ನು ಠೇವಣಿ ಇಡಲು ನಿರ್ಧರಿಸಿದರು. ಮಗಳ ಭವಿಷ್ಯ ಮತ್ತು ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಆಶಯ ಅವರದು. ಕೂಡಲೇ ಮಗಳ ಹೆಸರಲ್ಲಿ ಪಾನ್ ಕಾರ್ಡ್ ಪಡೆಯಲು ಅವರು ಅರ್ಜಿ ಸಲ್ಲಿಸಿದರು. ನಂತರ ಪಾನ್ ಕಾರ್ಡ್ ಪಡೆದರು.
(ಏಜನ್ಸೀಸ್)












Click it and Unblock the Notifications