ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ಹೆಜ್ಜೆಗಳು :ಕೋರ್ಟು ಅಂಗಳದಿಂದ ರಾಷ್ಟ್ರಪತಿ ಭವನದವರೆಗೆ

By Staff
|
Google Oneindia Kannada News

ನವದೆಹಲಿ, ಜುಲೈ 21: ದೇಶದ 13ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಶನಿವಾರ ಆಯ್ಕೆಯಾಗಿದ್ದಾರೆ. ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಪ್ರತಿಭಾ ಬಗ್ಗೆ ಕೆಲವು ಸಂಗತಿಗಳು :

ಜನನ :ಡಿ.19,1934

ಜನ್ಮ ಸ್ಥಳ :ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ

ವಿದ್ಯಾಭ್ಯಾಸ :ಎಂ.ಎ ಮತ್ತು ಕಾನೂನು ಪದವೀಧರೆ.

ರಾಜ್ಯ ರಾಜಕೀಯ :ಆರಂಭದಲ್ಲಿ ವಕೀಲಿ ವೃತ್ತಿ ಆಯ್ದುಕೊಂಡಿದ್ದ ಪ್ರತಿಭಾ, 1962ರಿಂದ 1985ರ ವರೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಚಿವರಾಗಿ ಸೇವೆ. ನಗರಾಭಿವೃದ್ಧಿ, ಶಿಕ್ಷಣ, ಪ್ರವಾಸೋದ್ಯಮ, ಆರೋಗ್ಯ ಖಾತೆಗಳನ್ನು ಯಶಸ್ವಿಯಾಗಿ ಅವರು ನಿರ್ವಹಿಸಿದ್ದಾರೆ. 1979ರಲ್ಲಿ ವಿರೋಧ ಪಕ್ಷದ ನಾಯಕಿ.

ರಾಷ್ಟ್ರ ರಾಜಕೀಯ : ರಾಜ್ಯಸಭೆಗೆ 1985ರಲ್ಲಿ ಪ್ರವೇಶ. 1986ರಿಂದ 88ರವರೆಗೆ ರಾಜ್ಯಸಭೆ ಉಪಸಭಾಪತಿಯಾಗಿ ಸೇವೆ. ನಂತರ 1988ರಿಂದ 90ರವರೆಗೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಣೆ. 1991ರಲ್ಲಿ ಅಮರಾವತಿ ಕ್ಷೇತ್ರದಲ್ಲಿ ಗೆದ್ದು ಲೋಕಸಭೆಗೆ ಪ್ರವೇಶ.

ಗೌರವದ ಹುದ್ದೆ : 2004ರಲ್ಲಿ ರಾಜಸ್ಥಾನ ರಾಜ್ಯಪಾಲೆಯಾಗಿ ನೇಮಕ.

ಪ್ರತಿಭಾ ಮೇಲಿನ ದೂರುಗಳು : ಕೊಲೆ ಆರೋಪಿ ಸಹೋದರನ ರಕ್ಷಣೆಗೆ ಪ್ರತಿಭಾರಿಂದ ತಮ್ಮ ಹುದ್ದೆಯ ದುರುಪಯೋಗ. ಪ್ರತಿಭಾ ಸ್ಥಾಪಿಸಿದ್ದ ಜಲಗಾಂವ್ ಮಹಿಳಾ ಸಹಕಾರಿ ಬ್ಯಾಂಕ್ ನಲ್ಲಿ ಅವ್ಯವಹಾರ. ಇವು ಪ್ರಮುಖ ಆರೋಪಗಳು.

ಪ್ರತಿಭಾ ವೈಯಕ್ತಿಕ ಬದುಕು :ಮಾಜಿ ಮಹಾಪೌರ ದೈವಿ ಸಿಂಗ್ ಶೇಖಾವತ್, ಪ್ರತಿಭಾರ ಪತಿ. ಕೀರ್ತಿಗೊಬ್ಬ ಮಗ, ಆರತಿಗೊಬ್ಬಳು ಮಗಳು. ಚಿಕ್ಕಚೊಕ್ಕ ಸಂಸಾರ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X