ಮನೆಯಲ್ಲೂ ನೋ ಸ್ಮೋಕಿಂಗ್!:ಬರಲಿದೆ ಕಾನೂನು
ನವದೆಹಲಿ, ಜುಲೈ 21: ನಾನು,ನನ್ನಿಷ್ಟ ಎಂಬಂತೆ ಯಾರೂ ಸಿಗರೇಟ್ ಸೇದುವಂತಿಲ್ಲ. ಹೊರಗಡೆ ಮಾತ್ರವಲ್ಲ, ಮನೆಯಲ್ಲೂ ಈ ನಿಯಮ ಅನ್ವಯ! ಒಂದು ವೇಳೆ ಸೇದಬೇಕಾದರೆ, ನಿಮ್ಮ ಹೆಂಡತಿ ಮತ್ತು ಮನೆಕೆಲಸದವರ ಅನುಮತಿ ಪಡೆಯಬೇಕು. ಇಂತಹ ಕಾನೂನು ಸದ್ಯದಲ್ಲೇ ಜಾರಿಗೆ ಬರುವ ಸಾಧ್ಯತೆಗಳಿವೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಕೇಂದ್ರ ಆರೋಗ್ಯ ಸಚಿವ ಅನ್ಭುಮಣಿ ರಾಮದಾಸ್, ಮುಂದಿನ 3ತಿಂಗಳೊಳಗಾಗಿ ಮನೆ, ಹೋಟೆಲ್, ಚಿತ್ರಮಂದಿರ, ರೈಲು ನಿಲ್ದಾಣ ಸೇರಿದಂತೆ ಎಲ್ಲೆಡೆ ಧೂಮಪಾನ ನಿಷೇಧ ಜಾರಿಗೆ ತರುವುದಾಗಿ ಹೇಳಿದರು.
ಈ ಹಿಂದೆ ಚಲನಚಿತ್ರಗಳಲ್ಲಿನ ಧೂಮಲೀಲೆ ದೃಶ್ಯಗಳಿಗೆ ಕಡಿವಾಣ ಹಾಕಿದ್ದ ರಾಮದಾಸ್ ಗೆ ಭಾರತವನ್ನು ತಂಬಾಕು ಮುಕ್ತವಾಗಿಸುವ ಬಯಕೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಈ ಕಾನೂನಿನ ಬಗ್ಗೆ ನೀವೇನಂತೀರಾ?
(ಏಜನ್ಸೀಸ್)












Click it and Unblock the Notifications