ಬೆಂಗಳೂರಿನ ಗರುಡಮಾಲ್‌ನಲ್ಲಿ ಇನ್ನೊಂದು ಅವಗಡ!

ಬೆಂಗಳೂರು, ಜುಲೈ 21: ನಗರದ ಗರುಡಮಾಲ್ ನಲ್ಲಿ ಶುಕ್ರವಾರ ರಾತ್ರಿ ಸುಮಾರು 9ರ ಸುಮಾರಿನಲ್ಲಿ ಲಿಫ್ಟ್ ಕೆಳಗೆ ಕುಸಿದ ಪರಿಣಾಮ, ನಾಲ್ಕು ಜನಕ್ಕೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬೆನ್ನಿಗೆ ಗಾಯವಾದ ಶೀಮಾ ಬಗಾರಿಯಾ , ಮಂಡಿಗೆ ಪೆಟ್ಟು ಮಾಡಿಕೊಂಡ ಅಲ್ತಾಫ್ ಮಹಮದ್ ಹಾಗೂ ಇತರರನ್ನು ಹತ್ತಿರದ ಹಾಸ್ಮಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಈ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಶೋಕ ನಗರ ಠಾಣೆ ಪೊಲೀಸರು ಹೇಳಿದ್ದಾರೆ.

ಘಟನೆ ವಿವರ:

ಕೆಳ ಅಂತಸ್ತಿನಿಂದ ಮೇಲಕ್ಕೆ ಹೊರಟಿದ್ದ ಲಿಫ್ಟ್ ಗೆ ಅದರ ಸಾಮರ್ಥ್ಯಕ್ಕಿಂತ ಅಧಿಕ ಜನ ಒಳ ಸೇರಿದ ಪರಿಣಾಮ , ಮಿತಿ ಮೀರಿದ ಭಾರ ತಡೆಯಲಾರದೆ ದಿಢೀರ್ ಕುಸಿತಕ್ಕೆ ಒಳಗಾಯಿತು.

ಸಾರ್ವಜನಿಕರ ಉದ್ದಟತನವೇ ಈ ಘಟನೆಗೆ ಕಾರಣ. ಗರುಡ ಮಾಲ್ ಸುರಕ್ಷಿತ ಕ್ರಮಗಳನ್ನು ಅನುಸರಿಸುವಲ್ಲಿ ಯಾವುದೇ ಲೋಪ ಮಾಡಿಲ್ಲ ಎಂದು ಗರುಡ ಮಾಲ್ ನ ಮಾಲೀಕರು ಹೇಳಿದ್ದಾರೆ.

ಇದೇ ಮಾಲ್ ನಲ್ಲಿ ಕೆಲದಿನಗಳ ಹಿಂದೆ ಎಸ್ಕಲೇಟರ್ ಸಂದಿನಿಂದ ಬಿದ್ದ ಆರು ವರ್ಷದ ಅಹನ್ ಎಂಬ ಬಾಲಕ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+