ಅಕ್ರಮ ಸಾರಾಯಿ ಹೊಳೆ ಈಜಲು ಸರ್ಕಾರದ ಕಸರತ್ತು!
ಬೆಳಗಾವಿ, ಜುಲೈ 17 : ರಾಜ್ಯದಲ್ಲಿನ ಸಾರಾಯಿ ನಿಷೇಧದಿಂದ ಕಂಗೆಟ್ಟ ಕುಡುಕರು, ಚಟ ತೀರಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಅವರಿಗೆ ಉತ್ತೇಜನ ನೀಡುವಂತೆ ಅಕ್ರಮ ಸಾರಾಯಿ ದಂಧೆ ಹೆಚ್ಚುತ್ತಿದೆ.
ನಕಲಿ ಮದ್ಯ ಸೇವಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಒಂದಿಬ್ಬರು ಮೃತಪಟ್ಟ ಘಟನೆಗಳೂ ನಡೆದಿವೆ. ರಾಜ್ಯದೆಲ್ಲೆಡೆ ಅಕ್ಷಮ ಮದ್ಯ ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳು ಬಿರುಸುಗೊಂಡಿವೆ.
ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಖಾನಾಪುರದಲ್ಲಿನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, 70ಲಕ್ಷ ರುಪಾಯಿ ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ 10ಜನರನ್ನು ಬಂಧಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಠ ಹೇಮಂತ್ ನಿಂಬಾಳ್ಕರ್, ಈ ನಕಲಿ ಮದ್ಯ ಮಾಜಿ ಸಾರಾಯಿ ಗುತ್ತಿಗೆದಾರ ಅರವಿಂದ ಶಿವಾಜಪ್ಪ ಜೋರಾಪುರ ಅವರಿಗೆ ಸೇರಿದ್ದು. ಆತನನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜೂನ್ 30ರಿಂದ ಸಾರಾಯಿ ತಯಾರಿಕೆ ಹಾಗೂ ಮಾರಾಟ ನಿಷೇಧಿಸಿದೆ.
(ಏಜನ್ಸೀಸ್)












Click it and Unblock the Notifications