ವಾಯುಭಾರ ಕುಸಿತದಿಂದ ಬಿರುಗಾಳಿ ಮತ್ತು ಮಳೆ?
ಬೆಂಗಳೂರು :ಶುಕ್ರವಾರ ಬೆಳಗ್ಗೆಯಿಂದಲೇ ಸೂರ್ಯನಿಲ್ಲದೇ,ರಾಜಧಾನಿನಗರ ಬೆಂಗಳೂರು ತಣ್ಣಗಿದೆ!ಮೋಡಕವಿದ ವಾತಾವರಣ ಮುಂದುವರೆದಿದೆ.ಅಲ್ಲಲ್ಲಿ ತುಂತುರು ಮಳೆ ಹನಿ ಸ್ಪರ್ಶವೂ ಜನರಿಗೆ ಲಭಿಸಿದೆ.
ಇತ್ತ ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಉತ್ತರ ಆಂಧ್ರದ ಕರಾವಳಿಯನ್ನು ಶುಕ್ರವಾರ ಪ್ರವೇಶಿಸಲಿದೆ. ಇದರಿಂದಾಗಿ ನರಸಾಪುರ, ವಿಶಾಖಪಟ್ಟಣಂನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹೈ.ಕ.ದಲ್ಲೂ ಮಳೆ ಸಂಭವ : ಈ ಪ್ರಕೋಪ ಹೈದರಾಬಾದ್ ಕರ್ನಾಟಕಕ್ಕೂ ತಟ್ಟಲಿದ್ದು, ರಾಯಚೂರು, ಬಳ್ಳಾರಿ, ಬಿಜಾಪುರ ಜಿಲ್ಲೆಗಳಲ್ಲಿ ಮಳೆ ತೀವ್ರವಾಗಲಿದೆ ಎಂದು ಇಲಾಖೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications