ಕೃಷ್ಣಗಿರಿಯಲ್ಲಿ ಹದಿನೈದನೇ ಅಖಿಲ ಭಾರತ ಮಾವು ಮೇಳ
ಹೊಸೂರು(ತಮಿಳುನಾಡು) : ಅಖಿಲ ಭಾರತ 15ನೇ ಮಾವು ಮೇಳ, ಕೃಷ್ಣಗಿರಿಯಲ್ಲಿ ಜೂನ್ 7ರಿಂದ 26ರವರೆಗೆ ಜರುಗಲಿದೆ. ದೇಶದ ನಾನಾ ಭಾಗದ ಮಾವು ಬೆಳೆಗಾರರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.
ಜೂನ್ 7ರಂದು ಇಲ್ಲಿನ ಸರ್ಕಾರಿ ಬಾಲಕರ ಶಾಲೆಯ ಮೈದಾನದಲ್ಲಿ ಮಾವಿನ ಮೇಳವನ್ನು ತಮಿಳುನಾಡಿನ ಕೃಷಿ ಸಚಿವ ವಿ.ಆರ್. ಆರ್ಮುಗಂ ಉದ್ಘಾಟಿಸಲಿದ್ದಾರೆ.
20 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 100ಕ್ಕೂ ಅಧಿಕ ಮಳಿಗೆಗಳಿರುತ್ತವೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಬೆಳೆಯಲಾಗುವ ವಿವಿಧ ರೀತಿಯ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟವಿರುತ್ತದೆ ಎಂದು ಕೃಷ್ಣಗಿರಿಯ ಜಿಲ್ಲಾಧಿಕಾರಿ ಡಾ. ಸಂತೋಷ್‌ಬಾಬು ತಿಳಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications