ರಾಜಧಾನಿಯಲ್ಲಿ ಇನ್ನೆರಡು ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳು
ಬೆಂಗಳೂರು : ತಲಾ ನೂರು ಹಾಸಿಗೆಯುಳ್ಳ ಎರಡು ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ, ರಾಜ್ಯ ಸರ್ಕಾರ ಈಗಾಗಲೇ 10ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಆರೋಗ್ಯ ಸಚಿವ ಆರ್.ಅಶೋಕ್, ಸುಮಾರು 60ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದರು.
ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಸಮೀಪದಲ್ಲಿ ಹೊಸ ಆಸ್ಪತ್ರೆ ತಲೆ ಎತ್ತಲಿದೆ. ಇಲ್ಲಿ ಮಧುಮೇಹಕ್ಕೆ ಮಾತ್ರ ಚಿಕಿತ್ಸೆ ಲಭ್ಯ. ಜೊತೆಗೆ ಮಧುಮೇಹಕ್ಕೆ ಸಂಬಂಧಿಸಿದ ಅಧ್ಯಯನ ಇಲ್ಲಿ ನಡೆಯಲಿದೆ. ಇನ್ನೊಂದು ಆಸ್ಪತ್ರೆ ಮಾಗಡಿ ರಸ್ತೆಯ ಕುಷ್ಠ ರೋಗ ಆಸ್ಪತ್ರೆ ಸಮೀಪ ನಿರ್ಮಾಣಗೊಳ್ಳಲಿದೆ ಎಂದು ಸಚಿವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications