ಸರದೇಶಪಾಂಡೆ ನಾಟಕ ನೋಡಿ, ಉಪಾಹಾರ ಸೇವಿಸಿ...!
ಬೆಂಗಳೂರು: ಗುರು ಸಂಸ್ಥೆ ನಾಟಕ ತಂಡದ ಮೂಲಕ, ಯಶವಂತ ಸರದೇಶಪಾಂಡೆ ತಮ್ಮ ಮೂರು ಜನಪ್ರಿಯ ನಾಟಕಗಳನ್ನು ನಗರದಲ್ಲಿ ಈ ವಾರ ಪ್ರದರ್ಶಿಸುತ್ತಿದ್ದಾರೆ.
’ಆಲ್ ದಿ ಬೆಸ್ಟ್’, ‘ರಾಶಿ ಚಕ್ರ’ ಹಾಗೂ ‘ಸಹಿ ರೀ ಸಹಿ’ -ಈ ಮೂರು ಹಾಸ್ಯ ನಾಟಕಗಳು ಕ್ರಮವಾಗಿ ಮಾ.23ರಿಂದ ಮಾ. 25 , ಮಾ. 30ರಿಂದಏಪ್ರಿಲ್ 1ರವರೆಗೆ ನಗರದ ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿವೆ.
ಎಂಟಿಆರ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈ ‘ರಂಗಸಂಭ್ರಮ‘ವನ್ನು ಆಯೋಜಿಸಲಾಗಿದೆ. ‘ಆರೋಗ್ಯಕರ ನಗೆ ಹಾಗೂ ಆರೋಗ್ಯಕರ ಆಹಾರ’ಎಂಬ ಸ್ಲೋಗನ್‌ನೊಂದಿಗೆ, ಎರಡು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಲಾಗಿದೆ.
ರಂಗಭೂಮಿಗೆ ಆದಾಯ ತರಲು ಹಾಗೂ ಕಂಪನಿಗೆ ತನ್ನ ಉತ್ಪನ್ನಗಳನ್ನು ಪ್ರಚಾರ ಮಾಡಲು ‘ರಂಗಸಂಭ್ರಮ’ ಸಹಕಾರಿಯಾಗಿದೆ ಎಂದು ಸರದೇಶಪಾಂಡೆ ಹೇಳುತ್ತಾರೆ.
ಟಿಕೆಟ್ ದೊರಕುವ ಸ್ಥಳಗಳು :
- ಜಯನಗರ, ಮಲ್ಲೇಶ್ವರಂ, ರಾಜಾಜಿನಗರ ಮತ್ತು ವಿಜಯನಗರದ ಕೆಎಸ್‌ಆರ್‌ಟಿಸಿ ಮಳಿಗೆಗಳು.
- ಸಪ್ನಾ ಬುಕ್ ಹೌಸ್.
- ಗಾಂಧಿ ಬಜಾರಿನ ಅಂಕಿತ ಪುಸ್ತಕ ಪ್ರಕಾಶನ.
- ದೂರವಾಣಿ -9900261369











Click it and Unblock the Notifications