ಮಾ.16ರಂದು ರಾಜ್ಯ ಬಜೆಟ್ : ಮ್ಯಾಜಿಕ್ ಉಂಟಾ?!
ಬೆಂಗಳೂರು : ಮಾ.16ರಂದು ರಾಜ್ಯ ಆಯವ್ಯಯ ಪತ್ರವನ್ನು ಹಣಕಾಸು ಸಚಿವ ಮತ್ತು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಮಂಡಲದಲ್ಲಿ ಮಂಡಿಸಲು, ಸಿದ್ಧತೆ ನಡೆಸಿದ್ದಾರೆ.
ಯಾರಿಗೂ ಹೊರೆಯಾಗದಂತೆ, ಜನಸಾಮಾನ್ಯರಿಗೆ ಕಷ್ಟವಾಗದಂತೆ, ತೆರಿಗೆ ರಹಿತ ಬಜೆಟ್ ನೀಡುವುದಾಗಿ ಹೇಳುತ್ತಿರುವ ಯಡಿಯೂರಪ್ಪ, ಬಜೆಟ್ ಜನಪ್ರಿಯಗೊಳಿಸಲು ಕಸರತ್ತು ನಡೆಸಿದ್ದಾರೆ.
ಸಾರಾಯಿ ನಿಷೇಧ, ರೈತರ ಸಾಲ ಮನ್ನಾ, ಲಾಟರಿ ನಿಷೇಧ ಮತ್ತಿತರ ವಿಚಾರಗಳ ಬಗ್ಗೆ ಬಜೆಟ್ ಏನು ಹೇಳಲಿದೆ ಎನ್ನುವ ಕುತೂಹಲ ರಾಜ್ಯದ ಜನರಲ್ಲಿದೆ. ಕಳೆದ ಒಂದು ವರ್ಷದಿಂದ ರಾಜ್ಯದ ಜನತೆಗೆ ಭರವಸೆಗಳ ಮೇಲೆ ಭರವಸೆಗಳನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೀಡುತ್ತಲೇ ಬಂದಿದ್ದಾರೆ. ಪೈಪೋಟಿಗೆ ಬಿದ್ದವರಂತೆ ಹೊಸ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಲೇ ಇದ್ದಾರೆ. ಅವರಿಗೀಗ ಸತ್ವ ಪರೀಕ್ಷೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications