‘ಹಿಂದೂ ಸಮಾಜೋತ್ಸವ ಸಮಿತಿಯೇ ಹೊಣೆ ಹೊರಲಿ’
ಬೆಂಗಳೂರು : ಹಿಂದೂ ಸಮಾಜೋತ್ಸವ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದು, ಈಗ ಉತ್ಸವದ ಅಪಾಯಗಳ ಬಗ್ಗೆ ಧ್ವನಿ ಕೇಳಿಬಂದಿದೆ.
ಹಿಂದೂ ಸಮಾಜೋತ್ಸವ ಸಂದರ್ಭದಲ್ಲಿ ಕೋಮು ಗಲಭೆಗಳು ನಡೆದು, ಸಾರ್ವಜನಿಕ ಸಂಪತ್ತಿಗೆ ನಷ್ಟ ಸಂಭವಿಸಿದರೆ ಗುರೂಜಿ ಜನ್ಮ ಶತಮಾನೋತ್ಸವ ಸಮಿತಿಯೇ ಹೊಣೆ. ಈ ಸಮಿತಿ ನಷ್ಟವನ್ನು ತುಂಬಿಕೊಡಬೇಕಾಗುತ್ತದೆ ಎಂಬ ಸೂಚನೆ ನೀಡುವಂತೆ ಕೋರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಂದನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.
ಲೇಖಕ ಶೂದ್ರ ಶ್ರೀನಿವಾಸ, ಬೆಂಗಳೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಮರುಳ ಸಿದ್ಧಪ್ಪ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಶಿವಾಜಿನಗರದ ಗಲಭೆಯನ್ನು ಉಲ್ಲೇಖಿಸಲಾಗಿದೆ. ಧಾರ್ಮಿಕ ಉತ್ಸವಗಳಿಂದ ಕೋಮು ಗಲಭೆಗಳಾಗಿ, ಸಮಾಜದ ಶಾಂತಿ ಭಂಗವಾಗುವ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications