ಪುಟ್ಟಣ್ಣ ಟಾಕೀಸ್ ಕೆಡವಿ ಮಲ್ಟಿಪ್ಲೆಕ್ಸ್ ನಿರ್ಮಾಣ - ಸಿಎಂ
ಬೆಂಗಳೂರು : ಜಯನಗರದಲ್ಲಿ ಈಗಿರುವ ಪುಟ್ಟಣ್ಣ ಚಿತ್ರಮಂದಿರ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಕೆಡವಿ, ಆ ಜಾಗದಲ್ಲಿ 50 ಕೋಟಿಗೂ ಹೆಚ್ಚು ವೆಚ್ಚದ ಮಲ್ಟಿಪ್ಲೆಕ್ಸ್ ಮಾಲ್ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಟಿ.ಎನ್.ಸೀತಾರಾಂ ನಿರ್ದೇಶನದ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ, ಮುಖ್ಯಮಂತ್ರಿಗಳು ಈ ವಿಚಾರ ತಿಳಿಸಿದರು.
ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಒದಗಿಸುವ ಸಲುವಾಗಿ ಸರ್ಕಾರ ಮಲ್ಟಿಪ್ಲೆಕ್ಸ್ ನಿರ್ಮಾಣದ ಯೋಜನೆ ರೂಪಿಸಿದೆ. ಅಲ್ಲದೇ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಮೀರಾ-ಮಾಧವ-ರಾಘವ : ನಗರದ ಸ್ಯಾಂಕಿ ಟ್ಯಾಂಕ್ ಬಳಿಯ ಉದ್ಯಾನವನದಲ್ಲಿ ರಮ್ಯಾ, ತಿಲಕ್ ಅಭಿನಯದ‘ಮೀರಾ-ಮಾಧವ -ರಾಘವ’ ಚಿತ್ರದ ಮೊದಲ ದೃಶ್ಯಕ್ಕೆ ಕುಮಾರಸ್ವಾಮಿ ಕ್ಲಾಪ್ ಮಾಡಿದರು.
ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ರವಿಚಂದ್ರನ್, ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್, ಈ ಟೀವಿಯ ಸುರೇಂದ್ರನಾಥ್, ಐ.ಎಂ. ವಿಠ್ಠಲ ಮೂರ್ತಿ, ಹಂಸಲೇಖ, ರಮೇಶ್ ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ಸಂಗೀತ ಕಟ್ಟಿ, ಸಿಹಿಕಹಿ ಚಂದ್ರು ಮತ್ತಿತರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications