ಸ್ಮಾರ್ಟ್‌ಕಾರ್ಡ್ ರೂಪದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಪಾಸ್
ಬೆಂಗಳೂರು : ತಿಂಗಳಿಗೊಮ್ಮೆ ಮೊಬೈಲ್ ರೀಚಾರ್ಚ್ ಮಾಡಿಸುವ ರೀತಿಯಲ್ಲಿ, ಕೆಎಸ್‌ಆರ್‌ಟಿಸಿ ಮಾಸಿಕ ಬಸ್‌ಪಾಸನ್ನು ಕೂಡ ರೀಚಾರ್ಚ್ ಮಾಡಿಸಬಹುದು.
ಹೇಗೆ ಅಂತೀರಾ. ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಈಗ ಹೈಟೆಕ್ ಅಗಿದೆ. ಬಸ್ ಪಾಸ್‌ಗಳು ಪೇಪರ್ ಕಾರ್ಡ್ ರೂಪದಿಂದ ಸ್ಮಾರ್ಟ್ ಕಾರ್ಡ್ ಅಗಿ ಬದಲಾಗಲಿದೆ. ಮುಂದಿನ ವರ್ಷದಿಂದ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗಲಿದೆ.
ಏನಿದು ಸ್ಮಾರ್ಟ್ ಕಾರ್ಡ್? ಏನಿದರ ವಿಶೇಷತೆ? :
- ಪೇಪರ್ ಕಾರ್ಡ್‌ಗಳು ಸಂಪೂರ್ಣ ರದ್ದು, ಸ್ಮಾರ್ಟ್ ಕಾರ್ಡ್ ಅಗಿ ರೂಪಾಂತರ.
- ಮೊದಲಿಗೆ ವಿದ್ಯಾರ್ಥಿಗಳ ಮಾಸಿಕ ಬಸ್ ಪಾಸ್‌ಗೆ ಸ್ಮಾರ್ಟ್ ಕಾರ್ಡ್ ರೂಪ.
- ಪ್ರತಿ ಕಾರ್ಡ್‌ನಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಸಂಚಾರ ಮಾಹಿತಿಜೊತೆಗೆ ರಹಸ್ಯ ಕೋಡ್ ಇರುತ್ತದೆ.
- ಕಂಡಕ್ಟರ್ ಬಳಿ ಇರುವ ಸ್ಮಾರ್ಟ್ ಕಾರ್ಡ್ ರೀಡರ್‌ನಿಂದ ಮಾಹಿತಿ ಪರಿಶೀಲನೆ.
- ಸ್ಮಾರ್ಟ್ ಕಾರ್ಡ್‌ನಿಂದ ನಕಲಿ ಬಸ್ ಪಾಸ್ ಜಾಲಕ್ಕೆ ಕಡಿವಾಣ.
- ಮುಂದೆ ಇದು ಮಲ್ಟಿ ಪರ್ಪಸ್ ಕಾರ್ಡ್ ಅಗಿ ಬಳಕೆಯಾಗುವ ಸಾಧ್ಯತೆಗಳಿವೆ. ಒಂದೇ ಕಾರ್ಡ್ ನಿಂದ, ಬಿಎಂಟಿಸಿ, ಕೆ ಎಸ್ಸಾರ್ಟಿಸಿ, ಎಟಿಎಂ ಹಾಗೂ ಮೇಟ್ರೋ ರೈಲಿಗೂ ಬಳಕೆ ಮಾಡುವಂತೆ ಬದಲಾವಣೆ ಅಗಲಿದೆ.












Click it and Unblock the Notifications